ಗುಜರಾತ್ ವಿರುದ್ಧದ ಪಂದ್ಯಕ್ಕೆ ಸಚಿನ್ ಅಲಭ್ಯ

7
ರಣಜಿ ಕ್ರಿಕೆಟ್

ಗುಜರಾತ್ ವಿರುದ್ಧದ ಪಂದ್ಯಕ್ಕೆ ಸಚಿನ್ ಅಲಭ್ಯ

Published:
Updated:

ಮುಂಬೈ (ಪಿಟಿಐ): ಗುಜರಾತ್ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ಅಲಭ್ಯರಾಗಿದ್ದಾರೆ. ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ  ಪ್ರವಾಸಿ ತಾಣವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚಿನ್ ನಾಕ್‌ಔಟ್ ಪಂದ್ಯಗಳಿಗೆ ಮುಂಬೈ ತಂಡದಲ್ಲಿ ಆಡಲಿದ್ದಾರೆ.ಈ ವಿಷಯವನ್ನು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಜಂಟಿ ಕಾರ್ಯದರ್ಶಿ ನಿತಿನ್ ದಲಾಲ್ ತಿಳಿಸಿದ್ದಾರೆ. `ಸಚಿನ್ ಜೊತೆ ನಾನು ಮಾತನಾಡಿದ್ದೇನೆ. ವಿಶ್ರಾಂತಿ ಪಡೆಯುತ್ತಿರುವ ಅವರು ಶನಿವಾರ ಆರಂಭವಾಗಲಿರುವ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ. ಅಕಸ್ಮಾತ್ ಮುಂಬೈ ನಾಕ್‌ಔಟ್ ಹಂತ ಪ್ರವೇಶಿಸಿದರೆ ತೆಂಡೂಲ್ಕರ್ ಲಭ್ಯರಾಗುತ್ತಾರೆ' ಎಂದು ನಿತಿನ್ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry