ಗುಜರಿ ಅಂಗಡಿಯಲ್ಲಿ ಸ್ಫೋಟ: ಗಾಯಗೊಂಡಿದ್ದ ಮಹಿಳೆ ಸಾವು

7

ಗುಜರಿ ಅಂಗಡಿಯಲ್ಲಿ ಸ್ಫೋಟ: ಗಾಯಗೊಂಡಿದ್ದ ಮಹಿಳೆ ಸಾವು

Published:
Updated:

ಬೆಂಗಳೂರು: ಹುಳಿಮಾವು ಗ್ರಾಮದ ಗುಜರಿ ವಸ್ತುಗಳ ಅಂಗಡಿಯೊಂದರಲ್ಲಿ ಶನಿವಾರ ಸಂಭವಿಸಿದ್ದ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸೆಲ್ವಿ (35) ಎಂಬುವರು ಸಾವನ್ನಪ್ಪಿದ್ದಾರೆ.ಸೆಲ್ವಿ ಗುಜರಿ ವಸ್ತುಗಳ ಅಂಗಡಿ ಮಾಲೀಕ ಬಾಲಕೃಷ್ಣನ್ ಅವರ ಪತ್ನಿ. ಸ್ಫೋಟದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟು ಸುರೇಶ್, ಸೆಲ್ವಿ ಮತ್ತು ಸರವಣ ಎಂಬುವರು ಗಾಯಗೊಂಡಿದ್ದರು. ಮೂರೂ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸೆಲ್ವಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಡೆ ಒಡೆಯಲು ಬಳಸುವ ಸ್ಫೋಟಕ (ಕೇಪು) ಮತ್ತಿತರ ವಸ್ತುಗಳನ್ನು ಮಾರಲು ವ್ಯಕ್ತಿಯೊಬ್ಬ ಅಂಗಡಿಗೆ ಬಂದಿದ್ದಾನೆ. ವಯರ್‌ನಲ್ಲಿದ್ದ ತಾಮ್ರದ ತಂತಿಯನ್ನು ಬಿಡಿಸಿ ಕೊಡುವಂತೆ ಹೇಳಿದ ಅಂಗಡಿಯವರು ಸುತ್ತಿಗೆ ನೀಡಿದ್ದಾರೆ.ಸುತ್ತಿಗೆಯಿಂದ ಆತ ವಯರ್ ಬಡಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಮೃತಪಟ್ಟಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry