ಗುರುವಾರ , ಜುಲೈ 29, 2021
24 °C

ಗುಟ್ಕಾ ಬದಲು ಮಾವಾ, ಮಸಾಲಾ ಸ್ಟಾರ್ ಬಂತು ಡುಂ ಡುಂ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ರಾಜ್ಯ ಸರ್ಕಾರದ ಆದೇಶದಂತೆ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆಯ ಸಿಬ್ಬಂದಿಯೊಂದಿಗೆ ನಗರದ ಎಲ್ಲ ಬೀಡಿ ಅಂಗಡಿಗಳನ್ನು ಜಪ್ತ್ ಮಾಡಿ ಗುಟ್ಕಾ ಮಾರಾಟ ಬಂದ್ ಮಾಡುವಂತೆ ಆದೇಶಿಸಿದರು. ಆದರೆ ಕೆಲವು ಹೋಲ್‌ಸೇಲ್ ಅಂಗಡಿಗಳಲ್ಲಿ ಸ್ಟಾಕ್ ಇದ್ದ ಆರ್‌ಎಂಡಿ, ಸ್ಟಾರ್, ಸಿದ್ದು, ವಿಮಲ್, ಫೈರ್ ಗುಟ್ಕಾ ಕೆಲವು ಬೀಡಿ ಅಂಗಡಿಯಲ್ಲಿ ಇನ್ನೂ ಕದ್ದುಮುಚ್ಚಿ ಮಾರಾಟ ನಡೆದಿದೆ. ಅಧಿಕಾರಿಗಳಿಗೆ ಗೊತ್ತಿದ್ದೂ ಜಾಣ ಕುರುಡರಾಗಿದ್ದಾರೆ.ಗುಟ್ಕಾ ಕೆಲವರಿಗೆ ದೊರೆಯ  ಕಾರಣ ಇಲ್ಲಿನ ಟಾಂಗಾ ನಿಲ್ದಾಣದ ಬಳಿ ಯುವಕನೊಬ್ಬ ಬೆಳಿಗ್ಗೆಯಿಂದಲೇ `ಮಾವಾ' ತಯಾರಿಸಲು ನಿರತನಾಗಿರುವನು.ಯುವಕರು ಗುಟ್ಕಾ ಬದಲು ಮಾವಾ ಖರೀದಿಸುವರು.ಆರ್‌ಎಂಡಿ ರೂ 25ರಿಂದ 30 ಮತ್ತು ಸ್ಟಾರ್ ರೂ 8ರಿಂದ 10ರವರೆಗೆ ಮಾರಾಟ ನಡೆದದ್ದರಿಂದ ಯುವಕರು ರೂ 5ಗೆ  ದೊರೆಯುವ ಮಾವಾಗೆ ಮೊರೆ ಹೋಗಿದ್ದಾರೆ.ಮತ್ತೆ  ಮಾರುಕಟ್ಟೆಯಲ್ಲಿ ಸ್ಟಾರ್ ಮಸಾಲಾ ಪ್ಯಾಕೆಟ್ ಜೊತೆಗೆ ಸ್ಟಾರ್ ಸಿಂಘಮ್ ತಂಬಾಕು ಪ್ಯಾಕೆಟ್ ಮಾರುಕಟ್ಟೆಗೆ ಬಂದಿದೆ. ಎರಡೂ ಸೇರಿಸಿ ತಿಂದರೆ ಸ್ಟಾರ್ ಗುಟ್ಕಾ ತಿಂದಂತೆ ಎಂದು ಗುಟ್ಕಾ ಪ್ರಿಯರು ಹೇಳುವರು. ಮಾವಾ ಬದಲು ಮತ್ತೆ ಮಸಾಲಾ ಸ್ಟಾರ್ ಸಿಂಘಮ್ ಸ್ಟಾರ್ ಖರೀದಿ ಜೋರಾಗಿ ನಡೆದಿದೆ.ಯುವಜನಾಂಗದ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿದರೆ ಗುಟ್ಕಾ ತಯಾರಿಸುವ ಕಂಪೆನಿಗಳು ಗುಟ್ಕಾ ಬಂದ್ ಮಾಡಿದೆ ಎಂದು ಹೇಳುತ್ತ ಪ್ಯಾಕೆಟ್ ಮೇಲೆ ಪಾನಮಸಾಲಾ ಎಂದು ಪ್ರಕಟಿಸಿ ಮಾರಾಟ ನಡೆಸಿದೆ.

ಸರ್ಕಾರ ಗುಟ್ಕಾ ನಿಷೇಧ ಮಾಡಿದಂತೆ ಆಯಿತೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.