ಶನಿವಾರ, ಮೇ 15, 2021
22 °C
ಚಿತ್ರದುರ್ಗ: ಜನಸಂಪರ್ಕ ಸಭೆಯಲ್ಲಿ ಎಸ್‌ಪಿಗೆ ಸಾರ್ವಜನಿಕರ ಆಗ್ರಹ

ಗುಟ್ಕಾ, ವೇಶ್ಯಾವಾಟಿಕೆ ನಿಷೇಧಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರವಿರುವ ಖಾಸಗಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಅಲ್ಲದೆ ಜಿಲ್ಲೆಯಾದ್ಯಂತ ಹೆಗ್ಗಿಲ್ಲದೆ ಮಟ್ಕಾ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದರು.ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು.ಮಟ್ಕಾ ಹಾಗೂ ಜೂಜಾಟಗಳಿಂದ ಕೂಲಿ ಕಾರ್ಮಿಕರು ದುಡಿದ ಹಣವನ್ನೆಲ್ಲ ವ್ಯರ್ಥ ಮಾಡುತ್ತಿದ್ದಾರೆ. ಅದಕ್ಕೆ ಯುವಕರು ಹೊರತಾಗಿಲ್ಲ ಎಂದು ದೂರಿದರು.ತಾಲ್ಲೂಕಿನ ಮಾಳಪ್ಪನಹಟ್ಟಿಯ ಬಳಿ ರಸ್ತೆ ಮಧ್ಯದಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ನಾಗರಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಪರವಾನಗಿ ಇಲ್ಲದೆ ಕೆಲವರು ಹೆಗ್ಗಿಲ್ಲದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅನೇಕರ ಕುಟುಂಬಗಳು ಬೀದಿ ಪಾಲಾಗುತ್ತಿದೆ. ಜತೆಗೆ ನಿರಂತರ ವಿದ್ಯುತ್ ಕಡಿತದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡರು.ಜಿಲ್ಲೆಯಲ್ಲಿ ಕಳ್ಳತನ ಹೆಚ್ಚಾಗಲು ಅಧಿಕ ಬಡ್ಡಿಯೇ ಕಾರಣವಾಗಿದೆ. ಕೆಲವರು ಫೈನಾನ್ಸ್ ವ್ಯವಹಾರ ಮಾಡುವ ಮೂಲಕ ಹೆಚ್ಚಿನ ಹಣಗಳಿಸಲು ತಮ್ಮ ಜಮೀನು ಮಾರಿಕೊಂಡು ನಗರ ಹಾಗೂ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ರೂ 100ಕ್ಕೆ ರೂ 10ರಂತೆ ಅಧಿಕ ಬಡ್ಡಿ ತೆಗೆದುಕೊಳ್ಳುತ್ತಿದ್ದು, ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಘಟನೆ ನಡೆದಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಂಜಪ್ಪ ಒತ್ತಾಯಿಸಿದರು.ಆಟೋಗಳಲ್ಲಿ ಪ್ರಯಾಣಿಕರು ಮರೆತು ವಸ್ತುಗಳನ್ನು ಬಿಟ್ಟು ಹೋದಲ್ಲಿ ಅದನ್ನು ಪಡೆಯುವುದಕ್ಕಾಗಿ ವಾಹನ ಸವಾರರ ಭಾವಚಿತ್ರ, ಚಾಲನಾ ಪರವಾನಗಿ ಹಾಗೂ ಮೊಬೈಲ್ ಸಂಖ್ಯೆಯನ್ನು ಆಟೋರಿಕ್ಷಾ ಚಾಲಕರ ಸೀಟಿನ ಹಿಂಬದಿಯಲ್ಲಿ ಅಳವಡಿಸಿದರೆ ಅನುಕೂಲವಾಗುವುದು ಎಂದು ಮನವಿ ಮಾಡಿದರು.ಹೆಚ್ಚುವರಿ ಎಸ್‌ಪಿ ಶಾಂತ್‌ರಾಜ್, ಜೆಡಿಎಸ್ ಮುಖಂಡರಾದ ತಾಜ್‌ಪೀರ್, ಜಯಣ್ಣ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.