ಮಂಗಳವಾರ, ಮೇ 18, 2021
30 °C

ಗುಟ್ಕಾ ಹೋಯ್ತು, ಮಾವಾ ಹೆಚ್ಚಾಯ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: ಇತ್ತೀಚೆಗೆ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡುತ್ತಿದ್ದಂತೆ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಕ್ರಮೇಣ ಕಡಿಮೆಯಾಯ್ತು. ಅದಕ್ಕೆ ಬದಲಾಗಿ ಮಾವಾ ಹೆಚ್ಚಾಯ್ತು.ಗುಟ್ಕಾ ಬದಲಿಗೆ ಸುಣ್ಣ, ಅಡಿಕೆ ಮತ್ತು ವಿವಿಧ ತಂಬಾಕುಗಳ ಮಿಶ್ರಣದಿಂದ ತಯಾರಿಸಿದ ಮಾವಾಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ತಂಬಾಕು ಸೇವಿಸುವ ಜನರು ಮಾವಾದ ಮೊರೆ ಹೋಗಿದ್ದಾರೆ. ಗುಟ್ಕಾ ಜೊತೆಗೆ ಮಾವಾ ಮೇಲೂ ಅಧಿಕಾರಿಗಳ ಕಣ್ಣು ಬಿದ್ದಿದೆ.ಇದರಿಂದಾಗಿ ಪಾನ್‌ಬೀಡಾ ಅಂಗಡಿಗಳು ಕದ್ದು ಮುಚ್ಚಿ ಮಾವಾ ಮಾರುತ್ತಿದ್ದಾರೆ. ಅಲ್ಲದೆ ಗುಟ್ಕಾ ನಿಷೇಧ ಮತ್ತು ಮಾವಾ ಮಾರಾಟಕ್ಕೆ ಪೊಲೀಸರ  ಕಟ್ಟೆಚ್ಚರದಿಂದ ಪಾನ್‌ಬೀಡಾ ಅಂಗಡಿಗಳು ಆರ್ಥಿಕ ನಷ್ಟ ಎದುರಿಸುವ ಆತಂಕದಲ್ಲಿವೆ. ಕುಟುಂಬ ನಿರ್ವಹಣೆ ಕಷ್ಟಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.ಪೊಲೀಸರು ಮಾವಾ ತಯಾರಿಸುವವರ ಮೇಲೆ ಕಣ್ಣಿಟ್ಟಿದ್ದಾರೆ.  ಮಾವಾ ತಿಕ್ಕಿದರೆ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ. ಸಾವಿರಾರು ರೂಪಾಯಿ ವಹಿವಾಟು ಮಾಡುತ್ತಿದ್ದ ಪಾನ್‌ಬೀಡಾ ಅಂಗಡಿಗಳ ವ್ಯವಹಾರ ನೂರು ರೂಪಾಯಿಯ ಆಸುಪಾಸಿನಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.