ಗುಟ್ಟಾ ವಿವಾದ: ಬಿಎಐ ತನಿಖೆ

7

ಗುಟ್ಟಾ ವಿವಾದ: ಬಿಎಐ ತನಿಖೆ

Published:
Updated:

ನವದೆಹಲಿ (ಪಿಟಿಐ): ಐಬಿಎಲ್‌ ಟೂರ್ನಿಯ ಬೆಂಗಾ ಬೀಟ್ಸ್‌ ಎದುರಿನ ಪಂದ್ಯದ ವೇಳೆ ವಿನಾಕಾರಣ ವಿವಾದ ಹುಟ್ಟು ಹಾಕಿದ ಡಬಲ್ಸ್‌ ಆಟಗಾರ್ತಿ ಜ್ವಾಲಾ ಗುಟ್ಟಾ ವಿರುದ್ಧ ತನಿಖೆ ನಡೆಸಲು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಮುಂದಾಗಿದೆ.‘ಜ್ವಾಲಾಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, 14 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ’ ಎಂದು ಬಿಎಐ ಶಿಸ್ತು ಸಮಿತಿ ಮುಖ್ಯಸ್ಥ ಎಸ್‌. ಮುರಳೀಧರ್‌ ತಿಳಿಸಿದ್ದಾರೆ.ತಂಡದಲ್ಲಿ ಇಲ್ಲದ ಆಟಗಾರನನ್ನು ಬೆಂಗಾ ಬೀಟ್ಸ್‌ ಕಣಕ್ಕಿಳಿಸಲು ಮುಂದಾಗಿದ್ದಕ್ಕೆ ದೆಹಲಿ ಸ್ಮ್ಯಾಷರ್ಸ್‌ ತಂಡದ ಜ್ವಾಲಾ ಆಕ್ಷೇಪ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry