ಗುಟ್ಟು ಬಿಡದ ಎಸ್‌ಪಿ, ಬಿಎಸ್‌ಪಿ

7
ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಎಫ್‌ಡಿಐಗೆ ಸಂಸತ್ತಿನಲ್ಲಿ ಬೆಂಬಲ

ಗುಟ್ಟು ಬಿಡದ ಎಸ್‌ಪಿ, ಬಿಎಸ್‌ಪಿ

Published:
Updated:

ನವದೆಹಲಿ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕೊಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಸತ್‌ನಲ್ಲಿ ಬೆಂಬಲಿಸುವ ಕುರಿತು ಎಸ್‌ಪಿ ಹಾಗೂ ಬಿಎಸ್‌ಪಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿವೆ.

ಎಫ್‌ಡಿಐ ಬಗ್ಗೆ ಲೋಕಸಭೆಯಲ್ಲಿ ಮಂಗಳವಾರ ಹಾಗೂ ಬುಧವಾರ (ಡಿ.4 ಮತ್ತು ಡಿ.5), ರಾಜ್ಯಸಭೆಯಲ್ಲಿ ಡಿ.6 ಮತ್ತು 7ರಂದು ಮಹತ್ವದ ಚರ್ಚೆ ನಡೆಯಲಿದೆ.

`ಕೋಮುಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದಕ್ಕೆ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಎಫ್‌ಡಿಐ ಅಗತ್ಯ~ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಸೋಮವಾರ ಅಭಿಪ್ರಾಯಟ್ಟಿದ್ದಾರೆ.

`ಮಧ್ಯಮ ಹಾಗೂ ಬಡ ವರ್ಗದ ಹಿತಾಸಕ್ತಿಗಳಿಗೆ ತೊಂದರೆಯಾಗದಂತೆ ಎಫ್‌ಡಿಐ ಮಾರ್ಪಾಡು ಮಾಡಿದಲ್ಲಿ ಅದರಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂಬುದು ಪಕ್ಷದ ನಿಲುವು~ ಎಂದೂ ಅವರು ತಿಳಿಸಿದ್ದಾರೆ.

`ಎಫ್‌ಡಿಐ ಕುರಿತು ಪಕ್ಷ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಿಲುವು ಪ್ರಕಟಿಸಲಿದೆ~ ಎಂದು ಮಾಯಾವತಿ ಹೇಳಿದ್ದಾರೆ.

ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಕೂಡ ಈ ವಿಷಯವಾಗಿ ತಮ್ಮ ಪಕ್ಷದ ನಿಲುವು ಏನು ಎನ್ನುವುದು ಸ್ಪಷ್ಟಪಡಿಸಿಲ್ಲ.  ನಾವು ಎಫ್‌ಡಿಐ ವಿರೋಧಿಸುತ್ತೇವೆ ಎನ್ನುವುದು ಗೊತ್ತಿರುವ ಸಂಗತಿ. ಏನು ಹೇಳಬೇಕೋ ಅದನ್ನು ಲೋಕಸಭೆಯಲ್ಲಿ ಹೇಳುತ್ತೇನೆ~ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾಂಗ್ರೆಸ್ ವಿಪ್ ಜಾರಿ

ನವದೆಹಲಿ (ಐಎಎನ್‌ಎಸ್): ಎಫ್‌ಡಿಐ ಕುರಿತು ಲೋಕಸಭೆಯಲ್ಲಿ ಮಂಗಳವಾರ ಹಾಗೂ ಬುಧವಾರ ಮತದಾನ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಎರಡೂ ದಿನಗಳ ಕಾಲ ಸದನದಲ್ಲಿ ಹಾಜರಿದ್ದು ಎಫ್‌ಡಿಐ ಪರ ಮತದಾನ ಮಾಡಲು ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.

`ಮತದಾನವೇ ಪರಿಹಾರವಲ್ಲ~

ನವದೆಹಲಿಯಲ್ಲಿ ನಡೆದ ಎಫ್‌ಡಿಐ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಎಡ ಪಕ್ಷಗಳ ಮುಖಂಡರು, `ಲೋಕಸಭೆಯಲ್ಲಿ ಈ ಕುರಿತು ಮತದಾನ ನಡೆಸಿದರೆ ಈ ಬಿಕ್ಕಟ್ಟು ಪರಿಹಾರವಾದಂತಾಗುವುದಿಲ್ಲ. ಜನವಿರೋಧಿ ನಿಲುವಿನ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ~ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry