ಗುಡಿಸಲು ತೆರವು: 7ನೇ ದಿನಕ್ಕೆ ಪ್ರತಿಭಟನೆ

7

ಗುಡಿಸಲು ತೆರವು: 7ನೇ ದಿನಕ್ಕೆ ಪ್ರತಿಭಟನೆ

Published:
Updated:

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಗ್ರಾಮದ ನಿವಾಸಿಗಳು ಗ್ರಾಮದ ಹೊರವಲಯದ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಗುಡಿಸಲುಗಳನ್ನು ಪೊಲೀಸರು ತೆರವು ಗೊಳಿಸಿರುವುದನ್ನು ವಿರೋಧಿಸಿ ನಿವಾಸಿಗಳು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ. ತಾಲ್ಲೂಕು ಆಡಳಿತ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಹಶೀಲ್ದಾರ್ ಅಣಕು ಶವ ಯಾತ್ರೆ ನಡೆಸಿ, ಮಹಾತ್ಮಗಾಂಧಿ ವೃತ್ತದಲ್ಲಿ ಸುಟ್ಟು ಧಿಕ್ಕಾರ ಕೂಗಿದರು.ಸಿಪಿಎಂ ಮುಖಂಡ ಸಿದ್ದಗಂಗಪ್ಪ, ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರ  ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಪ್ರಾಂತ ರೈತ ಸಂಘದ ಅಧ್ಯಕ್ಷ ರವಿಚಂದ್ರರೆಡ್ಡಿ, ಹೊಸೂರು ತಿಪ್ಪಣ್ಣ, ಅನ್ವರ್‌ಬಾಷಾ, ಶ್ರೀನಿವಾಸ್, ನಾಗರತ್ನಮ್ಮ, ಮಂಜುಳಮ್ಮ, ಶೌಖತ್, ಆನೂಡಿ ನಾಗರಾಜ್, ತಾಲ್ಲೂಕು ಛಲವಾದಿ ಸಂಘದ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬಂಡಿರಾಮನಹಳ್ಳಿ ಗಂಗಾಧರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry