ಗುಡಿ ಕೈಗಾರಿಕೆಯಿಂದ ಲಾಭ: ಭೀಮಸೇನಾ

ಭಾನುವಾರ, ಮೇ 19, 2019
33 °C

ಗುಡಿ ಕೈಗಾರಿಕೆಯಿಂದ ಲಾಭ: ಭೀಮಸೇನಾ

Published:
Updated:

ಕೊಳ್ಳೇಗಾಲ: `ಮಹಿಳೆಯರು ಕೈಕಸಬು, ಗುಡಿಕೈಗಾರಿಕೆ ಪ್ರಾರಂಭಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಕಂಡುಕೊಳ್ಳಬೇಕು~ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನಾ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಕಲ್ಕತ್ತಾ ನ್ಯಾಷನಲ್ ಸೆಣಬು ಮಂಡಳಿ, ಪಿ.ಎಸ್.ಎಸ್.ಗ್ರಾಮೀಣ ಸಂಸ್ಥೆ ಹಾಗೂ ಜನಸ್ಪಂದನ ಸೇವಾ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಮಹಿಳಾ ಸಂಘಗಳಿಗೆ ಏರ್ಪಡಿಸಿದ್ದ ಸೆಣಬಿನ ವಿವಿಧ ಉತ್ಪನ್ನಗಳ ತಿಳುವಳಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇವಲ ಉಳಿತಾಯದಿಂದ ಮಹಿಳೆ ಯರ ಆರ್ಥಿಕ ಪ್ರಗತಿ ಅಸಾಧ್ಯ. ಸೆಣ ಬಿನ ವಿವಿಧ ಉತ್ಪನ್ನಗಳು ಸೇರಿದಂತೆ ಇತರೆ ಉತ್ಪನ್ನಗಳ ತಯಾರಿಕೆ ಕಡೆಗೆ ಮಹಿಳೆಯರು ಮುಖಮಾಡಬೇಕು ಎಂದು ಹೇಳಿದರು.ವಿವಿಧ ಉತ್ಪನ್ನಗಳ ತಾಯಾರಿಕೆ ಮತ್ತು ಮಾರುಕಟ್ಟೆ ಬಗ್ಗೆ ಅನೇಕ ಸಂಘ ಸಂಸ್ಥೆ ಮೂಲಕ ಉತ್ತಮ ತರಬೇತಿ ಮಹಿಳಾ ಸಂಘಗಳಿಗೆ ದೊರೆಯುತ್ತಿದ್ದು, ಇಂತಹ ಸೌಲಭ್ಯ ಗಳನ್ನು ಮಹಿಳೆಯರು ಸದುಪ ಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲತೆಯನ್ನು ಹೊಂದಬೇಕು ಎಂದು ಕರೆನೀಡಿದರು.ಕಾರ್ಯಕ್ರಮವನ್ನು ಜಿ.ಪಂ. ಉಪಾಧ್ಯಕ್ಷ ಸಿದ್ದರಾಜು ಉದ್ಘಾಟಿಸಿ, ಮಹಿಳೆಯರು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ವಿಶೇಷ ಮಾರುಕಟ್ಟೆ ಸೌಲಭ್ಯ ಇರುವ ಸೆಣಬಿನ ವಿವಿಧ ಉತ್ಪನ್ನಗಳನ್ನು ಮಹಿಳೆಯರು ಮನೆಯಲ್ಲಿಯೇ ಕುಳಿತು ತಯಾರಿಸುವ ಮೂಲಕ ತಮ್ಮ ಆರ್ಥಿಕ ವ್ಯವಸ್ಥೆ ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಜೂಟ್ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಜಶೇಖರ್ ತಿಳಿಸಿದರು.ಜೂಟ್ ಉತ್ಪನ್ನಗಳಿಗೆ ಲಭ್ಯವಿರುವ ಮಾರುಕಟ್ಟೆ ಸೌಲಭ್ಯಗಳು ಮತ್ತು ಮಹಿಳೆಯರು ಈ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ, ಕರ್ನಾಟಕ ರಾಜ್ಯ ಅಧ್ಯಕ್ಷ ಎಚ್.ಎನ್. ನಂಜುಂಡರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಚಾಮರಾಜನಗರ ಆದಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಡಾ. ಸುರೇಂದ್ರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಮಹೇಶ್‌ಕುಮಾರ್, ಜಿ.ಪಂ. ಸದಸ್ಯೆ ಕೇತಮ್ಮ,ಪಿ.ಎಸ್.ಎಸ್. ಯೋಜನಾ ನಿರ್ದೇಶಕ ಶೇಷಪ್ರಸಾದ್, ಪರಶಿವ ಮೂರ್ತಿ, ಸೋಮಣ್ಣ, ಯರಿಯೂರು ನಾಗೇಂದ್ರ, ಕೃಷ್ಣಮೂರ್ತಿ, ಬಂಗಾರು ಇತರರು ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry