ಶುಕ್ರವಾರ, ಮೇ 7, 2021
18 °C

ಗುಡಿ ಜೀರ್ಣೋದ್ಧಾರ: ಕ್ರೈಸ್ತ ಧರ್ಮೀಯ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಜಗತ್ತಿನ ಎಲ್ಲ ಸಂಸ್ಕೃತಿಗಳೂ ಭಿನ್ನವಾಗಿದ್ದರೂ ಮತಧರ್ಮಗಳ ತಿರುಳು ಮಾತ್ರ ಒಂದೇ ಆಗಿದೆ ಎಂದು ಕ್ರೈಸ್ತ ಅನಿವಾಸಿ ಭಾರತೀಯ ಹಾಗೂ ದಾನಿ ರೊನಾಲ್ಡ್ ಕೊಲಾಸೊ ಹೇಳಿದರು.ತಾಲ್ಲೂಕಿನ ಚಿಕ್ಕಜಾಲ ಗ್ರಾಮದಲ್ಲಿರುವ ಪುರಾತನ ದೇವಾಲಯದ ಜೀರ್ಣೋದ್ಧಾರಕ್ಕೆ ನೆರವು ನೀಡಿದ್ದಕ್ಕೆ ಪ್ರತಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಲಾಸೊ ಅವರು, `1991ರಿಂದಲೂ ದೇವಾಲಯ,   ಚರ್ಚ್ ಮತ್ತು ಮಸೀದಿಗಳ ಜೀರ್ಣೋದ್ಧಾರಕ್ಕೆ ಕೈಲಾದಷ್ಟು ನೆರವು ನೀಡುವುದನ್ನು ರೂಢಿಸಿಕೊಂಡಿದ್ದೇನೆ. ಎ್ಲ್ಲಲರೂ ಸಹಬಾಳ್ವೆ ನಡೆಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಧರ್ಮಾರ್ಥ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ~ ಎಂದು ತಿಳಿಸಿದರು.ಇಲ್ಲಿನ ಐತಿಹಾಸಿಕ ಹೊಯ್ಸಳರ ಕಾಲದ ಶ್ರಿದೇವಿ ಮತ್ತು ಭೂದೇವಿ ಸಮೇತ ಚನ್ನರಾಯಸ್ವಾಮಿ ದೇವಾಲಯದ ಜೀಣೋದ್ಧಾರಕ್ಕೆ ರೊನಾಲ್ಡ್ ಕೊಲಾಸೊ 10 ಲಕ್ಷ ರೂಪಾಯಿಗಳನ್ನು ನೆರವು ನೀಡಿದ್ದಕ್ಕೆ ಪ್ರತಿಯಾಗಿ ಅವರನ್ನು ಇತ್ತೀಚೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.ಕೊಲಾಸೊ ಅವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ದೇವಾಲಯ ಸಮಿತಿ ಅಧ್ಯಕ್ಷ ಮುನಿ ನರಸಿಂಹಯ್ಯ, `ಐತಿಹಾಸಿಕ ಪರಂಪರೆ ಸ್ಮಾರಕ ಹಾಗೂ ದೇವಾಲಯಗಳು ಮುಂದಿನ ಪೀಳಿಗೆಗೆ ಉಳಿಯುವಂತಾಗಲು ಪ್ರಾಚ್ಯ ಇಲಾಖೆಗಳು ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. ಇಂತಹ ಮಹತ್ಕಾರ್ಯಕ್ಕೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿ ಪ್ರೋತ್ಸಾಹಿಸಿರುವ ಒಬ್ಬ ಕ್ರೈಸ್ತ ಸಮುದಾಯದ ವ್ಯಕ್ತಿಯ ಉದಾರತೆ ಜಾತ್ಯಾತೀತ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ~ ಎಂದು ಹೇಳಿದರು.ಕೊಲಾಸೊ ಅವರು 30 ಹಿಂದೂ ದೇವಾಲಯಗಳಿಗೆ ಸುಮಾರು 70 ಲಕ್ಷಕ್ಕೂ ಹೆಚ್ಚಿನ ಮೊತ್ತದ ನೆರವು ನೀಡಿರುವುದು ಗಮನಾರ್ಹ. ಎರಡು ದಶಕಗಳಿಂದಲೂ ಇವರು ಕೋಮು ಸೌಹಾರ್ದತೆಗಾಗಿ ಶ್ರಮಿಸುತ್ತಿದ್ದಾರೆ. ಸರ್ವಧರ್ಮಗಳಲ್ಲಿ ಸಾಮರಸ್ಯ ಮೂಡಿಸಲು ಇಂತಹ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದು ಎಲ್ಲರಿಗೂ ಅನುಕರಣೀಯ~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.