ಗುರುವಾರ , ಮೇ 6, 2021
23 °C

ಗುಡೇಕೋಟೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆಯ್ಲ್ಲಲಿ ಇತ್ತೀಚೆಗೆ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ನಡೆದ ಗ್ರಾಹಕರ ಸಮಾವೇಶವನ್ನು ನಿವೃತ್ತ ಮುಖ್ಯಶಿಕ್ಷಕ ಕೆ.ಗುರುರಾಜರಾವ್ ಉದ್ಘಾಟಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ಸಹಾಯಕ ಪ್ರಬಂಧಕ ಕೆ.ನಾಗಕಿರಣ್, ಸಿಂಡಿಕೇಟ್ ಬ್ಯಾಂಕ್ ರಾಜ್ಯದಲ್ಲಿ ರೂ 3 ಲಕ್ಷ ಕೋಟಿಯಷ್ಟು ವಹಿವಾಟನ್ನು ಹೊಂದಿದ್ದು, ಅತಿ ಶೀಘ್ರದ್ಲ್ಲಲಿಯೇ 264 ಹೊಸ ಶಾಖೆಗಳನ್ನು ಆರಂಭಿಸಲಿದೆ ಎಂದರು.ರೈತರಿಗೆ, ಜನಸಾಮಾನ್ಯರ ಸೇವೆಗಾಗಿ ಇರುವ ಬ್ಯಾಂಕ್ ಕೆಲವೇ ದಿನಗಳಲ್ಲಿ ಅತಿಕಡಿಮೆ ದರದ್ಲ್ಲಲಿ ರೈತರಿಗೆ ಕೃಷಿ ಸಾಲ ಇತರ ಸಾಲ ಹಾಗೂ ಕಡಿಮೆ ದರದಲ್ಲಿ ಬಂಗಾರದ ಮೇಲೆ ಸಾಲ ಹಾಗೂ ಆರ್‌ಟಿಜಿಎಸ್, ಎನ್‌ಇಎಫ್‌ಟಿ ಮುಂತಾದ ಅನೇಕ ಸೌಲಭ್ಯಗಳನ್ನು ಒದಗಿಸುವುದು ಎಂದು ಅವರು ವಿವರಿಸಿದರು.

ವೇದಿಕೆಯ್ಲ್ಲಲಿ ನಿವೃತ್ತ ಮುಖ್ಯಶಿಕ್ಷಕ ಗಂಗಣ್ಣ, ಗ್ರಾ.ಪಂ ಅಧ್ಯಕ್ಷೆ ಸೂರಮ್ಮ ಉಪಸ್ಥಿತರ್ದ್ದಿದರು.ಬ್ಯಾಂಕ್‌ನ ಮಲ್ಲೇಶಪ್ಪ ಪ್ರಾರ್ಥನಾ ಗೀತೆ ಹಾಡಿದರು. ಪವನ್ ಸ್ವಾಗತಿಸಿದರು. ಕೋದಂಡರಾಮಪ್ಪ ವಂದಿಸಿದರು. ಗುಡೇಕೋಟೆ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಹಕರು ಕಾರ್ಯಕ್ರಮದ್ಲ್ಲಲಿ ಪಾಲ್ಗೊಂಡಿದ್ದರು.ಸಿ.ಮಹೇಶ ನಿಧನಕ್ಕೆ ಸಂತಾಪ: ವಂದೇಮಾತರಂ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸಿ.ಮಹೇಶ ಅವರ ನಿಧನಕ್ಕೆ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಜಿ. ವೃಷಭೇಂದ್ರ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.ಚಿತ್ರದುರ್ಗ ಜ್ಲ್ಲಿಲೆಯ ಹೂವಿನಹೊಳೆಯ ಸಿ.ಮಹೇಶ್ ಅವರು, ಹಲವು ವರ್ಷಗಳಿಂದಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಅವರಿಂದ ವಂದೇಮಾತರಂ ಜಾಗೃತಿ ವೇದಿಕೆ ರಾಜ್ಯದಾದ್ಯಂತ ಪ್ರಚುರಗೊಂಡಿತ್ತು ಎಂದು ಅಧ್ಯಕ್ಷ ವಿ.ಜಿ. ವೃಷಭೇಂದ್ರ ಸಂತಾಪದಲ್ಲಿ ನೆನಪಿಸಿಕೊಂಡಿದ್ದಾರೆ. ತಾಲ್ಲೂಕಿನ ಎಲ್ಲ ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.