ಗುಡ್ಡದಲ್ಲಿ ಟೆಂಟ್‌ ನಿರ್ಮಿಸಿ ಧರಣಿ

7
ಕಳಸ: ವಿತರಣೆ ಆಗದ ನಿವೇಶನ

ಗುಡ್ಡದಲ್ಲಿ ಟೆಂಟ್‌ ನಿರ್ಮಿಸಿ ಧರಣಿ

Published:
Updated:

ಕಳಸ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ವಸತಿರಹಿತರಿಗೆ ನಿವೇಶನ ವಿತರಿಸಲು ಸಂಬಂಧಪಟ್ಟವರು ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಿಪಿಐ ಭಾನುವಾರ ಟೆಂಟ್‌ ಚಳವಳಿ ನಡೆಸಿತು.ದುಗ್ಗಪ್ಪನಕಟ್ಟೆ ಸಮೀಪದ ಬೀದಿಮನೆ ಬಳಿ ಗುಡ್ಡದ ಮೇಲೆ 100ಕ್ಕು ಹೆಚ್ಚು ತಾತ್ಕಲಿಕ ಟೆಂಟ್‌ಗಳನ್ನು ನಿರ್ಮಿಸಿದ ಪ್ರತಿಭಟನಾಕಾರರು ನಿವೇಶನ ಮಂಜೂರು ಮಾಡುವವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.‘ಹಿನಾರಿ ಸಮೀಪ ಸರ್ವೆ ನಂಬರ್‌ 85ರಲಿ್ಲ 10 ಎಕರೆ ಭೂಮಿಯನು್ನ ತಹಶಿೀಲಾ್ದರರು ಕುದುರೆಮುಖ ನಿವೇಶನರಹಿತರಿಗೆ ಮಂಜೂರು ಮಾಡಿದಾ್ದರೆ. ಆದರೆ ಆ ಪ್ರದೇಶದಲಿ್ಲ ಇರುವ ಅಕೇಶಿಯಾ ನೆಡುತೋಪು ಕಡಿಯಲು 2014ರ ವರೆಗೂ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಬಡ ಜನರಿಗೆ ಉದೇ್ದಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ’ ಎಂದು ಸಿಪಿಐ ಮುಖಂಡ ಲಕ್ಷ್ಮಣಾಚಾರ್‌ ಪ್ರಜಾವಾಣಿಗೆ ತಿಳಿಸಿದರು.ಕಳಸದ 500ಕೂ್ಕ ಹೆಚು್ಚ ನಿವೇಶನರಹಿತರಿಗೆ ನಿವೇಶನ ನೀಡಲು ಸೂಕ್ತ ಭೂಮಿ ಗುರುತಿಸಬೇಕು. ಗ್ರಾಮ ಪಂಚಾಯಿತಿ ಮತು್ತ ತಾಲ್ಲೂಕು ಪಂಚಾಯಿತಿ ನಿರ್ಲಕ್ಷ್ಯದಿಂದಾಗಿ ಬಡವರು ಬವಣೆ ಪಡುತ್ತಿದಾ್ದರೆ. ಈ ಬಾರಿ ಸರ್ವೆ ನಂಬರ್‌ 641, ಸ.ನಂ. 85 ಮತು್ತ ಸ.ನಂ. 434ರಲಿ್ಲ ನಿವೇಶನ ಹಂಚುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಅವರು ಹೇಳಿದರು.ಸಿಪಿಐ ಮುಖಂಡ ಸಾತಿ ಸುಂದರೇಶ್‌ ಸ್ಥಳಕೆ್ಕ ಭೇಟಿ ನೀಡಿ ಧರಣಿಗೆ ಬೆಂಬಲ ಸೂಚಿಸಿದರು. ಮುಖಂಡ­ರಾದ ಗೋಪಾಲ ಶೆಟಿ್ಟ, ರಮೇಶ್‌, ಪೆರಿಯಸಾ್ವಮಿ ಮತಿ್ತತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry