ಬುಧವಾರ, ಮೇ 12, 2021
17 °C

ಗುಡ್ ಫ್ರೈಡೇ ಕಲಾಭಿವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲೆಯ ಬಲೆಯ ಎಲ್ಲವನ್ನೂ ಬಿಡಿಸಿದವರಾರು? ಅದರ ಭಾವಾರ್ಥ ಅದರ ಸೃಷ್ಟಿಕರ್ತನಿಗೂ ಒಮ್ಮಮ್ಮೆ ನಿಗೂಢವೇ. ಭಾವಗಳನ್ನು ಬಣ್ಣಗಳೋ, ಗೆರೆಗಳೋ ಆಗಿಸಿದ ಅನೇಕ ಕಲೆಗಾರರು ಔನ್ನತ್ಯಕ್ಕೇರಿದ್ದಾರೆ.ಇಂಥವರ ಸಾಲಿನಲ್ಲಿ ನಿಲ್ಲುತ್ತಾರೆ ಮೈಸ್ಟಿಕ್ ಆರ್ಟಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೆ. ಎನ್.ನಾರಾಯಣ ಮೂರ್ತಿ. ಚಿತ್ರಗಳನ್ನು ಬಿಡಿಸಲಿಕ್ಕೆ ಇವರು ತುಳಿದಿರುವ ಹಾದಿ ತುಸು ಭಿನ್ನವೇ.ಪೆನ್ನಿನ ಮಸಿಯನ್ನು ಹಾಳೆಯ ಒಂದು ಭಾಗಕ್ಕೆ ತಮ್ಮ ಭಾವ ಲಹರಿಯಂತೆ ಹರಡುತ್ತಾರೆ. ಇನ್ನೊಂದು ಮಡಿಕೆಯಾಗಿ ಮಡಚಿದ ನಂತರ ಅದು ವಿಭಿನ್ನರೂಪದ ಕಲೆಯಾಗಿ ಮೂಡುತ್ತದೆ. (ಫೋಲ್ಡ್ ಅನ್ ಫೋಲ್ಡ್ ಆರ್ಟ್).ಸಾಮಾಜಿಕ ಆಶಯಗಳ ಮೇಲೆಯೇ ಇವರ ಕಲೆ ಒಡಮೂಡಿದೆ. ಪ್ರಸಕ್ತ ರಾಜಕೀಯ, ಚಿಪ್ಕೋ ಚಳವಳಿ, ವೀರಪ್ಪನ್ ಅಂತ್ಯ ಇವೆಲ್ಲ ಇವರ ಕಲೆಯಲ್ಲಿ ಬಿತ್ತರಿಸಿಕೊಂಡಿವೆ. ಪ್ರತಿವರ್ಷ `ಗುಡ್ ಫ್ರೈಡೆ~ ದಿನ ಏಸುವನ್ನು ತಮ್ಮ ಭಾವಕ್ಕೆ ತಕ್ಕಂತೆ ರಚಿಸುತ್ತಾರೆ. ಈ ಬಾರಿಯೂ ಅಂಥದ್ದೊಂದು ವಿಭಿನ್ನ ರಚನೆಯನ್ನು ಮಾಡಿದ್ದಾರೆ.`ಏಸುವನ್ನು ಶಿಲುಬೆಗೇರಿಸಿದ ಸಮಯದಲ್ಲಿ ಕೈಗಳಿಗೆ, ಹಣೆಗೆ ಹೊಡೆದಿದ್ದ ಮೊಳೆಗಳನ್ನು ಚಿತ್ರದಲ್ಲಿರುವ ಕೆಂಪು ಬಣ್ಣಗಳು ಸೂಚಿಸುತ್ತವೆ. ತಳಭಾಗದಲ್ಲಿರುವ ಕಪ್ಪು ಬಣ್ಣದ ಚುಕ್ಕೆಗಳು ಶಿಲುಬೆಗೇರಿಸಿದ ದುಷ್ಟರನ್ನು ಸೂಚಿಸುತ್ತವೆ~ ಎಂದು ವಿವರಿಸುತ್ತಾರೆ ನಾರಾಯಣ ಮೂರ್ತಿ.ಶಾಯಿಯನ್ನು ಹಾಳೆಯ ಮೇಲೆ ಚೆಲ್ಲುವ ಮೂಲಕವೇ ಬಗೆಬಗೆಯ ಚಿತ್ರಗಳನ್ನು ರಚಿಸಿರುವ ಇವರು, ನಾಸಿಕ್, ರಾಂಚಿ, ಕೋಲ್ಕತ್ತಾ, ಕೊಯಮತ್ತೂರು, ಕಾಸರಗೂಡು, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ ಇವರ ಕಲೆಗಳು 145 ಪ್ರದರ್ಶನವನ್ನು ಕಂಡಿವೆ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.