ಮಂಗಳವಾರ, ಜೂನ್ 15, 2021
27 °C

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ಪೋಷಕರು ಸಹಕಾರ ನೀಡ­ಬೇಕೆಂದು ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಪರಮೇಶ ಹೇಳಿದರು.ಶನಿವಾರ ಸ್ಥಳೀಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಹಿರಿಯ ಮತ್ತು ಪ್ರೌಢಶಾಲೆಗಳ 22ನೇ ವಾರ್ಷಿ­ಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತ­ನಾಡಿ, ಸರ್ಕಾರದ ಯೋಜನೆಗಳ ಸದು­ಪಯೋಗ ಪಡೆದುಕೊಳ್ಳುವಂತೆ ಹೇಳಿದರು.ಶಿಕ್ಷಣ ಇಲಾಖೆ ಸಂಪನ್ಮೂಲ ಅಧಿಕಾರಿ ಬಸವರಾಜ ಕರಡಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ವಾಲೇಬಾಬು ಮಾತನಾಡಿದರು. ಸಾನ್ನಿಧ್ಯವಹಿಸಿದ ಬಸವ ಪ್ರಸಾದ ಶರಣರು ಆರ್ಶೀವಚನ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜಿಯಾ ಬೇಗಂ, ಸಂಘದ ಉಪಾಧ್ಯಕ್ಷ ನಾಗರೆಡ್ಡಪ್ಪ, ಶಾಲೆಯ ಮುಖ್ಯಶಿಕ್ಷಕರು ಇದ್ದರು. ಸಂಜನಾ, ರಂಜಿತಾ, ಅಭಿಷೇಕ, ಅಂಕಿತ, ಹನುಮೇಶ, ಅಕ್ಷತಾ, ಬಸಲಿಂಗ ರವಿತೇಜಾ, ಸಬಿಯಾ ಬೇಗಂ, ರಸೂಲ ಹಾಗೂ ರೂಪಾ  ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದುಕೊಂಡರು. ವಿದ್ಯಾರ್ಥಿಗಳ ಜೊತೆ ಅವರ ಪಾಲಕರನ್ನುಗೌರವಿಸಲಾಯಿತು. ಶಿಕ್ಷಕಿ ತ್ರಿವೇಣಿ ಸ್ವಾಗಿತಿಸಿದರು. ವೆಂಕಟೇಶ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.