ಗುಣಮಟ್ಟದ ಶಿಕ್ಷಣದಿಂದ ಭವಿಷ್ಯ ಉಜ್ವಲ

7

ಗುಣಮಟ್ಟದ ಶಿಕ್ಷಣದಿಂದ ಭವಿಷ್ಯ ಉಜ್ವಲ

Published:
Updated:

ಸಿದ್ದಾಪುರ: ಶಿಕ್ಷಕರು ನೀಡುವ ಗುಣ ಮಟ್ಟದ ಶಿಕ್ಷಣದಿಂದ ಪ್ರತಿಯೊಬ್ಬರ ಭವಿಷ್ಯವು ಉಜ್ವಲ ವಾಗುತ್ತದೆ. ಉತ್ತಮ ವಿದ್ಯಾರ್ಥಿ ರೂಪು ಗೊಳ್ಳಲು ವಿದ್ಯಾರ್ಥಿಯ ಸಾಧನೆಯ ಜೊತೆ ಶಿಕ್ಷಕರ ಸಾಧನೆಯೂ ಪ್ರಮುಖ ವಾದುದು~ ಎಂದು ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿ ಹೇಳಿದರು.ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿ ಕೊತ್ಸವದಲ್ಲಿ ಅವರು ಮಾತನಾಡಿ ದರು.`ಸರ್ಕಾರವು ವಿವಿಧ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾರ್ಜನೆ ಮಾಡುವ ಅವಕಾಶವಿದೆ. ಪ್ರತಿಯೊಬ್ಬರೂ ಸರ್ಕಾರಿ ಉದ್ಯೋಗ ಕಲ್ಪಿಸುವುದು ಅಸಾಧ್ಯ. ಅದ್ದರಿಂದ ವಿದ್ಯಾರ್ಹತೆಗೆ ಸೂಕ್ತವಾದ ಯಾವುದೇ ಉದ್ಯೋಗ ಸಿಕ್ಕರೂ ತೃಪ್ತಿಹೊಂದಬೇಕು~ ಎಂದರು.

ತಾ.ಪಂ ಸದಸ್ಯ ರಟ್ಟಾಡಿ ನವೀನಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಹಾಲಾಡಿ ಜಿ.ಪಂ ಸದಸ್ಯ ರಶ್ವತ್ ಕುಮಾರ ಶೆಟ್ಟಿ ನೂತನ ಸಭಾಭವನ ಉದ್ಘಾಟಿಸಿದರು. ಅಮಾಸೆಬೈಲು ಗ್ರಾ.ಪಂ ಅಧ್ಯಕ್ಷ ಅಶೋಕ ಕುಮಾರ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಡಿಮನೆ ಗೋಪಾಲ ಶೆಟ್ಟಿ, ಆದರ್ಶ ಯುವಕ ಮಂಡಲದ ಅದ್ಯಕ್ಷ ಮಂದಾರ ಶೆಟ್ಟಿ, ವಾರ್ಷಿಕ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಐತಾಳ್, ವಿದ್ಯಾರ್ಥಿ ನಾಯಕ ರಾಧಾಕೃಷ್ಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬೋಜರಾಜ ಪೂಜಾರಿ, ಮುಖ್ಯ ಶಿಕ್ಷಕ ಜಯಂತ ಇದ್ದರು.ಸನ್ಮಾನ: ಕ್ಷೇತ್ರ ಶಿಕ್ಷಣಾಧಿಕಾರಿ ಶೇಡಿಮನೆ ಗೋಪಾಲ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಅನಂತ ಕೊಡ್ಗಿ, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ಶ್ವೇತಾ, ವಿವೇಕಾನಂದ, ರೇಷ್ಮಾ, ಶ್ರುತಿ, ಸಂದೇಶ್ ಅವರನ್ನು ಶಾಸಕರು ಸನ್ಮಾನಿಸಿದರು.ಉದ್ಯಮಿ ಕಿರಣ ಕುಮಾರ್ ಕೊಡ್ಗಿ, ಸಿ.ಆರ್.ಪಿ ಶೇಖರ್, ಗ್ರಾ.ಪಂ ಸದಸ್ಯರಾದ ರಾಮಣ್ಣ ಹೆಗ್ಡೆ, ಕೃಷ್ಣ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕರಾದ ಕರುಣಾಕರ ಹೆಗ್ಡೆ ಚಂದ್ರಶೇಖರ ಶೆಟ್ಟಿ, ಸದಾಶಿವ ಶೆಟ್ಟಿ, ಕಿಬೈಲು ಶ್ರಿಧರ ಶೆಣೈ, ಸತೀಶ್ ಹೆಬ್ಬಾರ್, ಇದ್ದರು.ಅಮಾಸೆಬೈಲು ಠಾಣಾಧಿಕಾರಿ ಆರ್.ಶಾಂತಪ್ಪ ಧ್ವಜಾರೋಹಣ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry