ಗುಣಮಟ್ಟದ ಶಿಕ್ಷಣ ಅಗತ್ಯ

7

ಗುಣಮಟ್ಟದ ಶಿಕ್ಷಣ ಅಗತ್ಯ

Published:
Updated:

ಧಾರವಾಡ: `ಮಕ್ಕಳ ಹಾಜರಾತಿ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತ ಪಠ್ಯ ಪುಸ್ತಕದ ಜೊತೆಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಪಾಲಕರ  ಇಂತಹ ಗುಣಗಳನ್ನು ಹೋಗಲಾ ಡಿಸುವ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇ ಕಾಗಿದೆ~ ಎಂದು ಸಿಸ್ಲೆಪ್‌ದ ನಿರ್ದೇಶಕ ವೈ.ಟಿ. ಗುರುಮೂರ್ತಿ ಹೇಳಿದರು.ಗುರುವಾರ ಇಲ್ಲಿನ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಪ್ರಾರ್ಥನಾ  ಮಂದಿರದಲ್ಲಿ, ಅಕ್ಷರ ಪ್ರತಿಷ್ಠಾನ ಮತ್ತು ನವದೆಹಲಿಯ ಅಸರ್ ಕೆಂದ್ರದ ಸಹಯೋಗದಲ್ಲಿ ಗುರುವಾರ ಆಯೋ ಜಿಸಿದ್ದ ಅಸರ್ ಕರ್ನಾಟಕ-2011ರ ವರದಿ (ಗ್ರಾಮಾಂತರ) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸರ್ಕಾರ ನಿರ್ಧ ರಿಸಿದ ರೀತಿಯಲ್ಲಿ ಇಂದಿಗೂ ಅದೇ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ.  ಶಾಲೆಗಳಲ್ಲಿ ಪರಿಹಾರ ಬೋಧನೆ ಎಂಬ ಕಾರ್ಯ ಕ್ರಮದಿಂದ ಶಿಕ್ಷಣದ ಗುಣಮಟ್ಟ ಹೆಚ್ಚುವುದರ ಜೊತೆಗೆ ಮಕ್ಕಳ ಆಸಕ್ತಿ ಹೆಚ್ಚುತ್ತಿದೆ ಎಂದರು.ಚಂದ್ರಶೇಖರ ಮಾತನಾಡಿ, ಯಾವ ಮಕ್ಕಳು ಕಲಿಕೆಯತ್ತ ಗಮನ ಕೊಡುವುದಿಲ್ಲವೋ ಅಂಥ ಮಕ್ಕಳಿಗೆ ಗಮನ ಹರಿಸುವಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಕಲಿಕೆ ಎನ್ನುವುದು ವಿಸ್ತಾರವಾದದ್ದು. ಹಂತ ಹಂತವಾಗಿ ಮಕ್ಕಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಅಸರ್ ಎಂಬ ಕಾರ್ಯಕ್ರಮ ಕೆಲಸ ಮಾಡುತ್ತಿದೆ.ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಗ್ರಂಥಾಲಯಗಳನ್ನು ನಿರ್ಮಿಸ ಲಾಗುತ್ತಿದೆ. ಗ್ರಂಥಾಲಯದಲ್ಲಿ ಆಯಾ ಮಕ್ಕಳ ಸಾಮರ್ಥ್ಯಕ್ಕೆ ತಕ್ಕ  ಪುಸ್ತಕ ಗಳನ್ನು ನೀಡಲಾಗುತ್ತದೆ  ಎಂದರು.

ಎ.ಶೇಷಾದ್ರಿ ಮಾತನಾಡಿ, ಇಂದು ಪಾಲಕರಲ್ಲಿ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ.ಭಾಗಶಃ ಶಾಲೆಗಳಲ್ಲಿ ಪಾಲಕರೇ ಎಸ್‌ಡಿಎಂಸಿ ಸದಸ್ಯರಾಗಿರುತ್ತಾರೆ. ಶಾಲೆಯ ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ ಅಲ್ಲಿರುವ ಸಮಸ್ಯೆಗಳನ್ನು ಅರಿತುಕೊಂಡಾಗ ಮಾತ್ರ ಅಸರ್ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.ಅಸರ್ ಕರ್ನಾಟಕ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಕೆ.ವೈಜಯಂತಿ ಅಸರ್-2011ರ ವರದಿ ಮಂಡನೆ ಮಾಡಿ, ಇಂದು ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಅವಶ್ಯಕತೆಗಳು ಇದ್ದು. ಅವರ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ ಶಿಕ್ಷಣ ನೀಡಲಾಗುತ್ತಿದೆ. ಆಯಾ ಗ್ರಾಮ ದಲ್ಲಿರುವ ಗ್ರಾ.ಪಂ.ಗಳು  ನಡೆಸುವ ಗ್ರಾಮ ಸಭೆಗಳಲ್ಲಿ ಶಾಲೆಗಳ ಬಗ್ಗೆ ಚರ್ಚೆ ಮಾಡದಿರುವುದು ವಿಷಾದದ ಸಂಗತಿ. ಸದಸ್ಯರು ಶಾಲೆಗೆ ಹೋಗಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry