ಗುಣಮಟ್ಟದ ಶಿಕ್ಷಣ ಮುಖ್ಯ

7

ಗುಣಮಟ್ಟದ ಶಿಕ್ಷಣ ಮುಖ್ಯ

Published:
Updated:
ಗುಣಮಟ್ಟದ ಶಿಕ್ಷಣ ಮುಖ್ಯ

ಮಾನಸ ಗಂಗೋತ್ರಿಯ ಕನ್ನಡ ಶಾಲೆಯಲ್ಲಿ ಪಾಠ ಚೆನ್ನಾಗಿ ಕಲಿಸುತ್ತಿದ್ದರು. ಅಲ್ಲಿ ಗುಣಮಟ್ಟದ ಶಿಕ್ಷಣ ಇತ್ತು. ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ತರಗತಿಗಳನ್ನು ಒಟ್ಟಿಗೆ ನಡೆಸುತ್ತಿದ್ದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಲ್ಲರೂ ಕನ್ನಡದಲ್ಲೇ ನೋಟ್ಸ್ ಮಾಡಿಕೊಳ್ಳುತ್ತಿದ್ದೆವು. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಅನೇಕ ಪದಗಳನ್ನು ಇಂಗ್ಲಿಷಿನಲ್ಲೂ ಹೇಳಿಕೊಡುತ್ತಿದ್ದರು. ಇದು ಇಂಗ್ಲಿಷ್ ಕಲಿಯುವ ದಾರಿಯನ್ನು ಸುಗಮಗೊಳಿಸಿತು. ನಮಗೆ ಮುಂದಿನ ಹಂತದಲ್ಲಿ ಇಂಗ್ಲಿಷ್ ಸರಾಗವಾಗಿ ಒಲಿಯಿತು.

 

`ಪ್ರಜಾವಾಣಿ~ ಕನ್ನಡ ಭಾಷಾ ಮಾಧ್ಯಮದ ಅಗತ್ಯತೆಯನ್ನು ಸಾರುವ ನಿಟ್ಟಿನಲ್ಲಿ ಲೇಖನ ಸ್ತುತ್ಯರ್ಹ. ಗ್ರಾಮೀಣ ಹಿನ್ನೆಲೆಯಿಂದ ಬಂದಂತಹ ಅನೇಕರು ಕನ್ನಡ ಮಾಧ್ಯಮದಲ್ಲೇ ಓದಿ, ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಿರುವ ನಿದರ್ಶನಗಳನ್ನು ಓದುಗರ ಮುಂದಿಟ್ಟು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಭ್ರಮೆಯಲ್ಲಿ ಸಿಲುಕಿರುವವರನ್ನು ಹೊರತರಲು ಮಾಡಿರುವ ಪ್ರಯತ್ನ ಸ್ತುತ್ಯರ್ಹ.ಇಂದು ಕಂಪ್ಯೂಟರ್ ಒಂದು ಆಧುನಿಕ ಮತ್ತು ವಿಸ್ಮಯದ ಆವಿಷ್ಕಾರ. ನಮ್ಮ ಭಾಷೆಯ ಬೆಳವಣಿಗೆಗೆ ಕಂಪ್ಯೂಟರ್ ಅನ್ನು ಸರಿಯಾಗಿ ದುಡಿಸಿಕೊಳ್ಳಬೇಕು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry