ಸೋಮವಾರ, ಮೇ 10, 2021
26 °C

ಗುಣಮುಖರಾದ ಪಾಟೀಲ ಪುಟ್ಟಪ್ಪ ಮನೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎಡಚಪ್ಪೆಯ ಮೂಳೆಮುರಿತಕ್ಕೆ ಒಳಗಾಗಿ ಕಿಮ್ಸನಲ್ಲಿ ಹದಿನೈದು ದಿನ ಚಿಕಿತ್ಸೆ ಪಡೆದ ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ಗುಣಮುಖರಾಗಿ ಭಾನುವಾರ ಮನೆಗೆ ತೆರಳಿದರು.ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಶುಶ್ರೂಷಕಿಯರು ಹಾಗೂ ಆಸ್ಪತ್ರೆಯ ಆಡಳಿತ ವರ್ಗ ಬೆಳಿಗ್ಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಪು, ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭಿಸಿದ್ದು ಎಲ್ಲರೂ ಆತ್ಮೀಯತೆಯಿಂದ ನೋಡಿಕೊಂಡ್ದ್ದಿದಾರೆ, ಇಲ್ಲಿನ ಸಿಬ್ಬಂದಿಯ ಆರೈಕೆಯಿಂದಾಗಿ ತಾವು ಶೀಘ್ರ ಗುಣಮುಖರಾಗಿದ್ದಾಗಿ ತಿಳಿಸಿದರು.ಕಿಮ್ಸನ್ಲ್ಲಲಿ ಉತ್ತಮ ಸೌಲಭ್ಯಗಳಿವೆ. ಒಳ್ಳೆಯ ವೈದ್ಯರಿದ್ದಾರೆ, ಹೀಗಾಗಿ ಈ ಸಂಸ್ಥೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಡಿಮೆ ಇಲ್ಲ ಎಂದು ಹೇಳಿದ ಅವರು, ಇದನ್ನು ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯನ್ನಾಗಿ ಮಾಡಲು ಎ್ಲ್ಲಲರೂ ಶ್ರಮಿಸಬೇಕು ಎಂದರು.ಚಂಡೀಗಡದಲ್ಲಿ ದೇಶದ ಅತ್ಯುತ್ತಮ ವೈದ್ಯಕೀಯ ಸಂಸ್ಥೆ ಇದೆ. ಚಂಡೀಗಡ ದೇಶದ ರಾಜಧಾನಿಗೆ ಸಮೀಪದ್ಲ್ಲಲಿದೆ. ಹುಬ್ಬಳ್ಳಿ ನವದೆಹಲಿಗೆ ಮಾತ್ರವಲ್ಲ, ರಾಜ್ಯ ರಾಜಧಾನಿಗೂ ದೂರದಲ್ಲಿದೆ. ಆದರೂ ಕಿಮ್ಸ ಅನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಪಾಪು ಹೇಳಿದರು.ಕಿಮ್ಸನ ಸೌಲಭ್ಯಗಳ ಬಗ್ಗೆ ಅನೇಕರು ಟೀಕೆ ಮಾಡುತ್ತಾರೆ. ಇದು ಸರಿಯಲ್ಲ. ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚು. ಹೀಗಾಗಿ ಸೌಲಭ್ಯಗಳು ಅನೇಕ ಸಂದರ್ಭದಲ್ಲಿ ಸಾಲದೇ ಹೋಗಬಹುದು ಎಂದು ಅಭಿಪ್ರಾಯಪಟ್ಟ ಅವರು, ಪ್ರಸೂತಿ ಕೇಂದ್ರದಲ್ಲಿ ಕೇವಲ ಮುನ್ನೂರು ಮಂದಿಗೆ ಮಾತ್ರ ಅವಕಾಶವಿದೆ.ಆದರೆ ಇ್ಲ್ಲಲಿಗೆ ತಿಂಗಳ್ಲ್ಲಲಿ ಸುಮಾರು 900 ಮಂದಿ ಆಗಮಿಸುತ್ತಾರೆ. ಅವರಿಗೆ ಸೌಲಭ್ಯ ಒದಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಪ್ರಸೂತಿ ವಾರ್ಡಿನ ಹಾಸಿಗೆಗಳ ಸಂಖ್ಯೆಯನ್ನು ಒಂದು ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.`ವಿಐಪಿ ವಿಭಾಗ ಶೀಘ್ರ ಪೂರ್ಣ~


ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ದೊಡಮನಿ, ಆಸ್ಪತ್ರೆಯಲ್ಲಿ ಗಣ್ಯ ವ್ಯಕ್ತಿಗಳಿಗಾಗಿ ನಿರ್ಮಿಸುತ್ತಿರುವ ವಿಭಾಗದ ಕೆಲಸ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಅದನ್ನು ಸಮಾಜಕ್ಕೆ ಅರ್ಪಿಸಲಾಗುವುದು ಎಂದು ತಿಳಿಸಿದರು.20 ಹಾಸಿಗೆಗಳನ್ನು ಒಳಗೊಂಡ ಹೊಸ ವಿಭಾಗದಲ್ಲಿ ಎರಡು ಕೊಠಡಿಗಳನ್ನು ಗಣ್ಯರಿಗಾಗಿ ಮೀಸಲಿಡಲಾಗುವುದು. ಇದು ಆರಂಭಗೊಂಡ ನಂತರ ಸಾಹಿತಿಗಳು, ರಾಜಕಾರಣಿಗಳು, ಚಿಂತಕರು ಮುಂತಾದವರಿಗೆ ಅನಾರೋಗ್ಯ ಕಾಡಿದಾಗ ಕಿಮ್ಸನಲ್ಲಿ ಚಿಕಿತ್ಸೆ ಪಡೆಯಲು ಸುಲಭವಾಗಬಹುದು ಎಂದು ಅವರು ಹೇಳಿದರು.ಪಾಪು ಅವರಿಗೆ ಡಾ. ಸುರೇಶ ಕೊರ್ಲಳ್ಳಿ, ಡಾ. ಡಿ.ಎಂ. ಕಬಾಡಿ, ಡಾ. ವೀರೇಂದ್ರ ಭಸ್ಮೆ, ಡಾ. ಸೂರ್ಯಕಾಂತ, ಡಾ. ಮಲ್ಲಿಕಾರ್ಜುನ ಬಾಬು, ಅರಿವಳಿಕೆ ತಜ್ಞರಾದ ಡಾ. ಸಾಧನಾ ಶೇಟ್, ಡಾ. ಮಾಧವ ಕುರಡಿ ಹಾಗೂ ಶುಶ್ರೂಷಕ ವಿಭಾಗದ ಅಧೀಕ್ಷಕಿ ಪಿ.ಎಫ್. ಗೊರವನಹಳ್ಳಿ ಅವರ ನೇತೃತ್ವದ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು ಎಂದು ದೊಡಮನಿ ತಿಳಿಸಿದರು. ಪಾಪು ಅವರ ಪುತ್ರ ಅಶೋಕ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.