ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ

7

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ

Published:
Updated:

ನರಗುಂದ: ಆಧುನಿಕ ಯುಗದಲ್ಲಿ ಬದಲಾವಣೆಗೆ  ತಕ್ಕಂತೆ ಶಿಕ್ಷಣ ನೀಡ ಬೇಕಾಗಿದೆ. ಎಲ್ಲ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ನಡೆಯಬೇಕಾಗಿದೆ. ಅದಕ್ಕೆ ಎಸ್‌ಡಿಎಂಸಿ ಸದಸ್ಯರ ಸಹಕಾರ ಅಗತ್ಯ ಎಂದು  ಬಿಆರ್‌ಸಿ ಸಮನ್ವಯಾಧಿಕಾರಿ ಪಿ.ಎಫ್.ಸೋಲ್ಲಾಪೂರಿ ಹೇಳಿದರು.  ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ 1ರಲ್ಲಿ ನಡೆದ ಎಸ್‌ಡಿಎಂಸಿ ಸದಸ್ಯರುಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.ಸರ್ವಶಿಕ್ಷಣ ಅಭಿಯಾನದಡಿ ಪ್ರಾಥಮಿಕ ಶಾಲೆಗಳ ಭೌತಿಕ ಸ್ಥಿತಿ ಗತಿ, ಮಕ್ಕಳ ನಿರಂತರ ಹಾಜರಾತಿಗೆ ಗಮನ ನೀಡುವ ಮೂಲಕ  ಸಮರ್ಪಕ ಬೋಧನೆ ಮಾಡಲಾಗುತ್ತಿದೆ ಎಂದರು.  ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಶಾಂತಕುಮಾರ ಭಜಂತ್ರಿ, ಎಸ್.ಎಸ್. ಉಳ್ಳೇಗಡ್ಡಿ,  ಮುಖ್ಯ ಶಿಕ್ಷಕ ಆರ್. ಎಂ. ತಬಲಚಿ, ಎ.ಎ.ಕಾದೀಮ, ಎ.ಎಲ್. ಲಾಮಿಯಾ, ಎ.ಎಚ್.ದಾಸರ, ಎಸ್. ಸಿ.ಪಾಟೀಲ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ನಾಮಫಲಕ ಉದ್ಘಾಟನೆ

ನರಗುಂದ:
ಪಟ್ಟಣದ ಜಮಲಾ ಪುರ ಓಣಿಯ ಸಿದ್ಧೇಶ್ವರ ಕೊಳಚೆ ಪ್ರದೇಶದ 1 ಮತ್ತು 2ನೇ ಹಂತ ಗಳ ನಾಮ ಫಲಕದ ಉದ್ಘಾಟನೆ ಹಾಗೂ ಶಾಸಕ ಸಿ.ಸಿ.ಪಾಟೀಲರ 54ನೇ ಹುಟ್ಟು ಹಬ್ಬದ ಅಭಿನಂದನಾ ಸಮಾರಂಭ ಇದೇ 22ರಂದು ಬೆಳಿಗ್ಗೆ 9 ಗಂಟೆಗೆ ನಡೆಯ ಲಿದೆ.  ಸಾನ್ನಿಧ್ಯವನ್ನು ಪತ್ರಿವನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ರು, ಅಧ್ಯಕ್ಷತೆಯನ್ನು ಚಂದ್ರು ಪವಾರ, ಗೌರವಾಧ್ಯಕ್ಷತೆಯನ್ನು ರುದ್ರಯ್ಯ ಶಿರುಂದಮಠ ವಹಿಸುವರು.  ಉದ್ಘಾಟಕರಾಗಿ ಶಾಸಕ ಸಿ.ಸಿ.ಪಾಟೀಲ, ಜಿ.ಪಂ ಅಧ್ಯಕ್ಷ ಎಂ.ಎಸ್.ಪಾಟೀಲ, ತಾಪಂ ಅಧ್ಯಕ್ಷ ಜಿ.ಎಸ್.ಆದೆಪ್ಪನವರ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry