ಗುರುವಾರ , ಮೇ 19, 2022
20 °C

ಗುಣಾತ್ಮಕ ಶಿಕ್ಷಣವೇ ಗುರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಇತ್ತೀಚಿನ ವರ್ಷಗಳಲ್ಲಿ ವಿದ್ಯಾಸಂಸ್ಥೆಗಳನ್ನು ಆರಂಭಿಸಲು ಸ್ಪರ್ಧೆಯೇ ನಡೆದಿದ್ದು, ಮಹೋನ್ನತ ಉದ್ದೇಶ ಹೊಂದಿದ ಸಂಸ್ಥೆಗಳು ಮಾತ್ರ ಜೀವಂತವಾಗಿ ಉಳಿಯುತ್ತವೆ.  ಗುಣಾತ್ಮಕ ಶಿಕ್ಷಣ `ಮಾ ಸಾರದಾ~ ಪದವಿ ಪೂರ್ವ ಕಾಲೇಜಿನ ಗುರಿಯಾಗಲಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಚಂದ್ರಶೇಖರ ಆರ್.ತೊರವಿ ಅವರು ಕರೆ ನೀಡಿದರು.ತಾಲ್ಲೂಕಿನ ಆರ್.ಎಚ್.ಕಾಲೊನಿ ನಂ.4 (ಶಾಂತಿನಗರ) ರಲ್ಲಿ ಭಾನುವಾರ `ಮಾ ಸಾರದಾ~ ಪದವಿ ಪೂರ್ವ ಕಾಲೇಜಿನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಳೆದ 42 ವರ್ಷಗಳಿಂದ ತಾಲ್ಲೂಕಿನ ಐದು ಪುನರ್ವಸತಿ ಕ್ಯಾಂಪ್‌ಗಳು ಬದುಕು ಸಾಗಿಸುತ್ತಿದ್ದು, ಶೈಕ್ಷಣಿಕವಾಗಿ ಹಿನ್ನಡೆಯಲ್ಲಿವೆ. ಜನಕಲ್ಯಾಣ ಸಂಸ್ಥೆ ಶೈಕ್ಷಣಿಕ ಕೊರತೆಯನ್ನು ತುಂಬುವ ಮಹತ್ವಾಕಾಂಕ್ಷೆಯಿಂದ ಪದವಿಪೂರ್ವ ಕಾಲೇಜು ಯಶಸ್ವಿಯಾಗಿ ನಡೆಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದರು.ಸಾನಿಧ್ಯ ವಹಿಸಿದ್ದ ಮೈಸೂರು ರಾಮಕೃಷ್ಣಾಶ್ರಮದ ವಿವೇಕಪ್ರಭ ಪತ್ರಿಕೆ ಸಂಪಾದಕ ಸ್ವಾಮಿ ವೀರೇಶಾನಂದ ಮಹಾರಾಜ ಮಾತನಾಡಿ, ವಿದ್ಯಾರ್ಥಿಗಳು ಸ್ವಂತ ಶ್ರಮದಿಂದ ಅಕ್ಷರವನ್ನು ಕಲಿತು ಮಹಾನ್ ಜ್ಞಾನಿಗಳಾಗಬೇಕು ಎಂದು ಕಿವಿಮಾತು ನುಡಿದರು.ಜನಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಶರಣಕುಮಾರ ಎಸ್.ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮೀಣ ಮತ್ತು ಶಹರ ಪೊಲೀಸ್ ಠಾಣೆಯ ಪ್ರೊಬೆಶನರಿ ಪಿಎಸ್‌ಐ ಗಳಾದ ಇಮ್ರಾನ್, ನಸೀರ್‌ಹುಸೇನ, ಸಂಸ್ಥೆಯ ಉಪಾಧ್ಯಕ್ಷೆ ಅನೀಮಾ ಮುಜುಂದಾರ, ನಿವೃತ್ತ ಪ್ರಾಚಾರ್ಯ ಬಸನಗೌಡ, ಪ್ರಾಚಾರ್ಯ ಎಸ್.ಜಿ.ಬಿರಾದರ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸೇನ ರಪ್ತಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಸುತಾರ್ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.