ಗುತ್ತಲ: ಬಾರದ ಮಳೆ ಕಾಣದ ಬೆಳಕು!

7

ಗುತ್ತಲ: ಬಾರದ ಮಳೆ ಕಾಣದ ಬೆಳಕು!

Published:
Updated:

ಗುತ್ತಲ: ರಾಜ್ಯದಲ್ಲಿ ಉದ್ಭವಿಸಿರುವ ಭೀಕರ ಬರದ ಮಧ್ಯೆ ಬೆಳಕಿನ ಹಬ್ಬ ದೀಪಾವಳಿಯ ಛಾಯೆ ಹರಡಿದೆ. ಬರ ಪರಿಸ್ಥಿತಿಯಿಂದಾಗಿ ದೀಪಾವಳಿ ಹಬ್ಬದ ಸಡಗರಕ್ಕೆ ಅಡ್ಡಿಯಾಗಿದ್ದು,  ಈ ವರ್ಷದ ಬೆಳಕಿನ ಹಬ್ಬಕ್ಕೆ ಬರದ ಕಾರ್ಮೋಡದ ಛಾಯೆ ಆವರಿಸಿದ್ದ ರಿಂದ ದೀಪಾವಳಿ ಹಬ್ಬದ ಆಚರಣೆಗೆ ರೈತರು ಉತ್ಸುಕತೆ ತೋರುತ್ತಿಲ್ಲ.ಈ ಬಾರಿಯ ಮುಂಗಾರು ಸಂಪೂರ್ಣ ವಿಫಲವಾಗಿದೆ. ಹಿಂಗಾರು ಪ್ರಾರಂಭವಾಗಿ ತಿಂಗಳು ಕಳೆದರೂ ಮಳೆಯ ಸುಳಿವಿಲ್ಲ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಾಳು ಕಟ್ಟುವ ಮುನ್ನವೆ ಒಣಗಿ ಹಾಳಾಗಿದೆ. ಬಿತ್ತನೆ ಗಾಗಿ ಮಾಡಿದ್ದ ಖರ್ಚು ವೆಚ್ಚಗಳನ್ನೂ ಸಹ ಗಿಟ್ಟಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

 

ಗುತ್ತಲ ಹೋಬಳಿ ಶೇ 90 ಭಾಗ ಜಮೀನು ನೀರಾವರಿಗೆ ಒಳಪಟ್ಟಿದ್ದರೂ ಬರಗಾಲ ಮಾತ್ರ ತಪ್ಪಿಲ್ಲ. ಕಾರಣ ನೀರಾವರಿಗೆ ಅಗತ್ಯವಾದ ವಿದ್ಯುತ್ ಪೂರೈಕೆ ಇಲ್ಲದಿ ರುವುದು ಸದ್ಯದ ಪರಿಸ್ಥಿತಿಗೆ ಕಾರಣ ವಾಗಿದೆ.

 ಗ್ರಾಮೀಣ ಪ್ರದೇಶದಲ್ಲಿ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಪಂಪ್‌ಸೆಟ್ ಸೌಲಭ್ಯ ಪಡೆದ ರೈತರು ನದಿ ಯಲ್ಲಿ ನೀರಿದ್ದರೂ ವಿದ್ಯುತ್‌ನ ಕೊರತೆ ಯಿಂದಾಗಿ ಒಣಗುತ್ತಿರುವ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಾರದಷ್ಟು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.ಗುತ್ತಲ ಭಾಗದ ಪ್ರಮುಖ ಬೆಳೆ ಗಳಾದ ಮೆಕ್ಕೆ ಜೋಳ, ಹತ್ತಿ, ಶೇಂಗಾ, ಭತ್ತ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ಮಳೆಯಿಲ್ಲದೆ ಸಂಕಷ್ಟಕ್ಕಿಡಾ ಗಿವೆ. ಅಲ್ಲದೆ ಹಿಂಗಾರಿ ಹಂಗಾಮಿನ ಪ್ರಮುಖ ಬೆಳೆಯಾದ  ಜೋಳ ಈವ ರೆಗೂ ಪೂರ್ಣ ಪ್ರಮಾಣದ ಬಿತ್ತನೆ ಯಾಗಿಲ್ಲ.

 

ಹಸ್ತ ಮಳೆ ಕಳೆದು ಚಿತ್ತಿ ಮಳೆ ಬೀಳುವ ಅಕ್ಟೋಬರ್ ಮೊದಲ ವಾರದಲ್ಲಿ ಜೋಳದ ಬಿತ್ತನೆಯಾಗ ಬೇಕಿತ್ತು. ಹಾವನೂರು, ಗಳಗನಾಥ, ಹರಳಹಳ್ಳಿ, ಹೊಸರಿತ್ತಿ, ಕೊರಡೂರು, ಹಂದಿಗನೂರು, ಮೇಲ್ಮರಿ ಸೇರಿದಂತೆ ಕೆಲವೆ ಸ್ಥಳಗಳಲ್ಲಿ ಮಳೆಯಾಗಿದ್ದು, ಉಳಿದಂತೆ ಗುತ್ತಲ, ಬರಡಿ, ಬಸಾ ಪೂರ, ಕೂರಗುಂದ, ನೆಗಳೂರು ಸೇರಿ ದಂತೆ ಹೆಚ್ಚಿನ ಪ್ರದೇಶದಲ್ಲಿ ಮಳೆಯಾ ಗಿಲ್ಲ. ಚಿತ್ತಿ ಮಳೆ ಸಾಧಾರಣವಾಗಿ ಆಗಿದ್ದರಿಂದ ಪೂರ್ಣ ಪ್ರಮಾಣದ ಬಿತ್ತನೆ ಆಗಿಲ್ಲ.ಬರ ಘೋಷಣೆ ಹಾಗೂ ಬೆಲೆ ಏರಿಕೆ ತಡೆಯಲು ವಿಫಲವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಯಿಂದಾಗಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸಂಭ್ರಮದ ಬದಲು ಸೂತಕ ಆವರಿಸಿದೆ ಎಂದು ಫಕ್ಕಿರೇಶ ಹಳ್ಳಾ ಕಾರ ಆರೋಪಿಸಿದ್ದಾರೆ.ಗುತ್ತಲ ಹೋಬಳಿಯಲ್ಲಿ ಬೆಳೆಗಳು  ಹಾನಿಗೀಡಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಈ ಭಾಗದ ರೈತರ ಸಮ ಸ್ಯೆಗಳನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಬೇಕು. ಅಲ್ಲದೆ ಹಾವೇರಿ ತಾಲ್ಲೂ ಕು ಅನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಹಾವನೂರು ಏತ ನೀರಾವರಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಮುರುಗೇಶಪ್ಪ ಯಳಮಲ್ಲಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry