ಶುಕ್ರವಾರ, ಜೂನ್ 18, 2021
28 °C

ಗುತ್ತಿಗೆ ಅಕ್ರಮ: ಎಎಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡಿ.ವಿ.­ಸದಾನಂದ­ಗೌಡರ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿ­ಕಾರ (ಬಿಡಿಎ) 2012ರಲ್ಲಿ ಜಯ­ನಗರ 4ನೇ ಹಂತದಲ್ಲಿ ಹೊಸ ಮಾರು­ಕಟ್ಟೆ ಮತ್ತು ಮಲ್ಲೇಶ್ವರದ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆ ನೀಡುವಲ್ಲಿ ಆಕ್ರಮ ಎಸಗಿವೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸದಸ್ಯ ರವಿಕುಮಾರ್ ಆರೋಪಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ­­ನಾಡಿ, ‘ಪುಟ್ಟಣ್ಣ ಕಣಗಾಲ್ ಚಿತ್ರ­­ಮಂದಿರ ಮತ್ತು ಜಯನಗರ ಮಾರು­­ಕಟ್ಟೆ­ಯನ್ನು ಕೆಡವಿ ಹೊಸ ಮಾರು­­ಕಟ್ಟೆ ಸಂಕೀರ್ಣವನ್ನು ನಿರ್ಮಿ­ಸಲು ₨ 115 ಕೋಟಿಗೆ  ಟೆಂಡರ್ ಕರೆ­ಯ­­ಲಾಗಿತ್ತು. ಆದರೆ ನಿಯಮ­ಗಳನ್ನು ಗಾಳಿಗೆ ತೂರಿ ₨ 252 ಕೋಟಿಗೆ ಗುತ್ತಿಗೆ ನೀಡಲಾಗಿದೆ’ ಎಂದು ಆರೋಪಿಸಿದರು.‘ನಿಯಮದ ಪ್ರಕಾರ ಮೂಲ ಮೊತ್ತಕ್ಕಿಂತ ಗರಿಷ್ಠ ಶೇ. 10 ರಷ್ಟು ಹೆಚ್ಚಿನ ಮೊತ್ತದ ಪ್ರಸ್ತಾಪವನ್ನು ಮಾತ್ರ ಪರಿಗಣಿಸಲು ಅವಕಾಶವಿದೆ. ಮೇಲಿನ ಪ್ರಕರಣದಲ್ಲಿ ಶೇ.100ಕ್ಕೂ ಹೆಚ್ಚಿನ ಮೊತ್ತದ ಪ್ರಸ್ತಾವಕ್ಕೆ ಗುತ್ತಿಗೆ ನೀಡಲಾಗಿದೆ’ ಎಂದರು.

ಎಎಪಿ ಸದಸ್ಯ ಮಂಜುನಾಥ್, ‘ಮಲ್ಲೇಶ್ವರದ ಮಾರುಕಟ್ಟೆ ನಿರ್ಮಾ­ಣಕ್ಕೆ ₨ 64 ಕೋಟಿ ಮೊತ್ತಕ್ಕೆ ಟೆಂಡರ್ ಕರೆದು ₨ 132 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷ ಈ ಬಗ್ಗೆ   ಜಾಣ ಕುರುಡನ್ನು ಪ್ರದರ್ಶಿಸುತ್ತಿವೆ’ ಎಂದು ಆರೋಪಿಸಿದರು.‘ರಾಜ್ಯ ಸರ್ಕಾರ ಈ ಎರಡೂ ಟೆಂಡರ್‌­ಗಳನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು’ ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.