ಗುತ್ತಿಗೆ ಅವ್ಯವಹಾರ: ಸಿಬಿಐ ಆಂತರಿಕ ತನಿಖೆ ಆರಂಭ

7

ಗುತ್ತಿಗೆ ಅವ್ಯವಹಾರ: ಸಿಬಿಐ ಆಂತರಿಕ ತನಿಖೆ ಆರಂಭ

Published:
Updated:

ನವದೆಹಲಿ (ಪಿಟಿಐ): ಪ್ರಫುಲ್ ಪಟೇಲ್ ಅವರು ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಏರ್ ಇಂಡಿಯಾ ಗುತ್ತಿಗೆಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆಂತರಿಕ ತನಿಖೆ ಆರಂಭಿಸಿದೆ.2007ರಲ್ಲಿ 100 ದಶಲಕ್ಷ ಡಾಲರ್ ಮೌಲ್ಯದ ಏರ್ ಇಂಡಿಯಾ ಗುತ್ತಿಗೆಗೆ ಸಂಬಂಧಿಸಿದಂತೆ ಭಾರತೀಯ ಮೂಲದ ಕೆನಡಾ ಉದ್ಯಮಿ ನಾಸಿರ್ ಅವರ ವಿರುದ್ಧ ಮಾಡಲಾದ ಆರೋಪಗಳನ್ನು ಕೆನಡಾ ಪೊಲೀಸರು ರಾಜತಾಂತ್ರಿಕ ಮಾರ್ಗದ ಮೂಲಕ ಸಿಬಿಐಗೆ ಮಾಹಿತಿ ನೀಡಿದ್ದಾಗಿ ಭಾನುವಾರ ಅಧಿಕೃತ ಮೂಲಗಳು ತಿಳಿಸಿವೆ.ಗುತ್ತಿಗೆ ಪಡೆಯಲು ಪ್ರಫುಲ್ ಪಟೇಲ್ ಅವರ ಸಹಾಯಕರೊಬ್ಬರಿಗೆ ತಾವು 2.50 ಲಕ್ಷ ಡಾಲರ್ ಲಂಚ ನೀಡಿದ್ದಾಗಿ ನಾಸಿರ್ ಹೇಳಿಕೊಂಡಿದ್ದರು.ಪ್ರಯಾಣಿಕರ ಚಹರೆ ಗುರುತಿಸುವ ಗಣಕೀಕೃತ ವ್ಯವಸ್ಥೆಗಾಗಿ 2006ರಲ್ಲಿ ಏರ್ ಇಂಡಿಯಾ ಟೆಂಡರ್ ಕರೆದಿತ್ತು. ಕ್ರಿಪೊ ಮೆಟ್ರಿಕ್ಸ್ ಕಂಪೆನಿ ಪರವಾಗಿ ಟೆಂಡರ್ ಪಡೆಯಲು ನಾಸಿರ್ ಯತ್ನಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry