ಸೋಮವಾರ, ಮೇ 17, 2021
30 °C

ಗುಪ್ತದಳ ಸುಳಿವು ನೀಡಿತ್ತು: ಚಿದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರದ ರಾಜಧಾನಿ ಮೇಲೆ ಉಗ್ರರು ದಾಳಿ ನಡೆಸುವ ಸಂಚು ಹೊಂದಿದ್ದಾರೆಂಬ ಸುಳಿವನ್ನು ಗುಪ್ತದಳ ಜುಲೈ ತಿಂಗಳಲ್ಲಿ ದೆಹಲಿ ಪೊಲೀಸರೊಂದಿಗೆ ವಿನಿಮಯ ಮಾಡಿಕೊಂಡಿತ್ತು. ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಅದರ ನಡುವೆಯೂ ರಾಜಧಾನಿಯಲ್ಲಿ ಬಾಂಬ್ ದಾಳಿ ನಡೆದಿರುವುದು ವಿಷಾದಕರ ಗೃಹ ಸಚಿವ ಪಿ.ಚಿದಂಬರಂ ಸಂಸತ್ತಿನಲ್ಲಿ ಹೇಳಿದರು.ಈ ಸ್ಫೋಟದ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದನ್ನು ಈ ಕ್ಷಣದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಸರ್ಕಾರವನ್ನು ಇಂತಹ ದಾಳಿಯಿಂದ ಬೆದರಿಸಲು ಸಾಧ್ಯವಿಲ್ಲ. ಈ ಭೀಕರ ದುಷ್ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲಾಗುವುದು ಎಂದರು.

 

ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ವಿಷಾದದ ಧ್ವನಿಯಲ್ಲಿ ಒಂದೇ ತರಹದ ಹೇಳಿಕೆಗಳನ್ನು ನೀಡಿದ ಗೃಹ ಸಚಿವರು, `ಜನತೆಯಲ್ಲಿ ಭಯ ಹುಟ್ಟಿಸಿ ರಾಷ್ಟ್ರದಲ್ಲಿ ಅಭದ್ರತೆ ಮೂಡಿಸುವುದು ಉಗ್ರರ ಉದ್ದೇಶ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.