ಗುರುವಾರ , ಮೇ 13, 2021
39 °C

ಗುಬ್ಬಲಾಳ ಕೆರೆ ಮುಚ್ಚಿ ಬಡಾವಣೆ ನಿರ್ಮಾಣ: ಸ್ಥಳೀಯರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರಹಳ್ಳಿ ಸಮೀಪದ ಗುಬ್ಬಲಾಳದ ವೆಂಕಟರಾಯನ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಿದ್ದ ಬಿಡಿಎ  ಅಧಿಕಾರಿಗಳು ಕೆರೆಯನ್ನು ಮುಚ್ಚಿ, ಆ ಜಾಗದಲ್ಲಿ ಬಡಾವಣೆ ನಿರ್ಮಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.ಸರ್ಕಾರ, ಗುಬ್ಬಲಾಳ ಸರ್ವೆ ನಂ.8ರ 4.15 ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಸೂಚಿಸಿ ಆ ಜಾಗವನ್ನು ಐದು ವರ್ಷಗಳ ಹಿಂದೆ ಬಿಡಿಎಗೆ ವರ್ಗಾಯಿಸಿತ್ತು. ಆದರೆ, ಕೆರೆಯನ್ನು ಅಭಿವೃದ್ಧಿಪಡಿಸಬೇಕಿದ್ದ ಅಧಿಕಾರಿಗಳು, ಕೆರೆಯನ್ನು ಮುಚ್ಚಿ ಆ ಜಾಗದಲ್ಲಿ ಬನಶಂಕರಿ ಆರನೇ ಹಂತದ ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ. ಆ ಜಾಗದಲ್ಲಿ 60 ನಿವೇಶನಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇತ್ತೀಚೆಗೆ ಆ ಭಾಗದ ರಾಜ ಕಾಲುವೆಯ ಅಭಿವೃದ್ಧಿ ಹಾಗೂ ಕಾಲುವೆಗೆ ತಂತಿಬೇಲಿ ಹಾಕಲು ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಕೆರೆಯ ಜಮೀನನನ್ನು ಮುಚ್ಚಿರುವ ಸಂಗತಿ ಬೆಳಕಿಗೆ ಬಂದಿತ್ತು. ಅಲ್ಲದೇ, ಸಮೀಪದ ಮಂತ್ರಿ ಅಪಾರ್ಟ್‌ಮೆಂಟ್‌ನಿಂದಲೂ ಕೆರೆ ಹಾಗೂ ರಾಜಾ ಕಾಲುವೆಯ ಜಾಗ ಒತ್ತುವರಿಯಾಗಿರುವುದು ಪರಿಶೀಲನೆ ವೇಳೆ ಬರೆಯಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಶ್ಯಾಮ್ ಭಟ್, `ಕೆರೆಯನ್ನು ಮುಚ್ಚಿರುವುದು ಬಿಡಿಎ ಅಧಿಕಾರಿಗಳೇ ಅಥವಾ ಖಾಸಗಿ ವ್ಯಕ್ತಿಗಳೇ ಎಂಬ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.