ಗುಬ್ಬಿ: ನಿವೃತ್ತ ಪಿಎಸ್‌ಐ ಮನೆಯಲ್ಲಿ ಕಳವು

7

ಗುಬ್ಬಿ: ನಿವೃತ್ತ ಪಿಎಸ್‌ಐ ಮನೆಯಲ್ಲಿ ಕಳವು

Published:
Updated:

ಗುಬ್ಬಿ: ಪಟ್ಟಣದ ಮಹಾಲಕ್ಷ್ಮೀ ಬಡಾವಣೆ, ಮಾರುತಿ ನಗರದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ.

ಮಹಾಲಕ್ಷ್ಮೀ ಬಡಾವಣೆಯ ನಿವೃತ್ತ ಪಿಎಸ್‌ಐ ಎ.ಎಂ.ಅಬ್ದುಲ್ ರೆಹಮಾನ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಡೋರ್‌ಲಾಕ್ ಒಡೆದು ರೂ.1.54ಲಕ್ಷ ಮೌಲ್ಯದ 38 ಗ್ರಾಂ ನೆಕ್ಲೇಸ್, 3 ಉಂಗುರ, 5 ಗ್ರಾಂ ಹ್ಯಾಂಗಿಂಗ್ಸ್ ಹಾಗೂ 32 ಸಾವಿರ ನಗದು ದೋಚಿದ್ದಾರೆ.ಮಾರುತಿ ನಗರದ ಶಿಕ್ಷಕ ಲಕ್ಷ್ಮೀಪತಿ ಎಂಬುವರು ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ಬಾಗಿಲು ಮುರಿದು ರೂ.7 ಸಾವಿರ ನಗದು, 7ಗ್ರಾಂನ ಓಲೆ ಕದ್ದೊಯ್ದಿದ್ದಾರೆ. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೂಂಡಿದ್ದಾರೆ.ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry