ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ

7

ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ

Published:
Updated:

ಗುಬ್ಬಿ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಜೆ.ಡಿ.ಸುರೇಶ್‌ಗೌಡ ಮತ್ತು ಉಪಾಧ್ಯಕ್ಷರಾಗಿ ಎನ್.ಪುಷ್ಪಾವತಿ ಶುಕ್ರವಾರ ಆಯ್ಕೆಯಾದರು.ಒಟ್ಟು 17 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್‌ನ 12, ಕೆಜೆಪಿಯ 3 ಹಾಗೂ ಕಾಂಗ್ರೆಸ್‌ನ 2  ಸದಸ್ಯರು ಇದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಜೆಡಿಎಸ್‌ನ ಜಿ.ಡಿ.ಸುರೇಶ್‌ಗೌಡ ಹಾಗೂ ಕೆಜೆಪಿಯ ಕೃಷ್ಣಮೂರ್ತಿ ಸ್ಪರ್ಧಿಸಿದ್ದರು.ಜೆಡಿಎಸ್‌ನ 12 ಸದಸ್ಯರು ಜೆ.ಡಿ.ಸುರೇಶ್‌ಗೌಡರಿಗೆ ಮತ ನೀಡಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಕೆಜೆಪಿಯ ಕೃಷ್ಣಮೂರ್ತಿ ಸ್ವಪಕ್ಷದ 3 ಮತ ಮತ್ತು ಕಾಂಗ್ರೆಸ್‌ನ 2 ಮತ ಪಡೆದು ಪರಾಭವಗೊಂಡರು.ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಿತ್ತು. ಅರ್ಹರು ಒಬ್ಬರೇ ಇದ್ದ ಕಾರಣ ಜೆಡಿಎಸ್‌ನ ಎನ್.ಪುಷ್ಪಾವತಿ ಅವಿರೋಧವಾಗಿ ಆಯ್ಕೆಯಾದರು. ತಹಶೀಲ್ದಾರ್ ಅನಿಲ್‌ಕುಮಾರ್ ಚುನಾವಣಾಧಿಕಾರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry