ಸೋಮವಾರ, ಮೇ 10, 2021
27 °C

ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹಿರಿಯ ರಂಗ ಸಂಗೀತ ನಿರ್ದೇಶಕ ಪಿ.ವಜ್ರಪ್ಪ ಹಾಗೂ ಹಿರಿಯ ರಂಗ ನಟಿ ಪ್ರಮೀಳಾ ಗುಡೂರು          (ಫಾತಿಮಾ) ಅವರನ್ನು 2009 ಮತ್ತು 2010ನೇ ಸಾಲಿನ ರಂಗಭೂಮಿಯ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ  ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಶಸ್ತಿಯು ಮೂರು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.



ಹಿರಿಯ ರಂಗ ಕಲಾವಿದ ಎಚ್.ಟಿ.ಅರಸು ಅಧ್ಯಕ್ಷತೆಯ ಆಯ್ಕೆ ಸಮಿತಿಯು ನಿನ್ನೆ ಕೊಪ್ಪಳ ಜಿಲ್ಲೆ ಹನುಮಸಾಗರದಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಣಯಕ್ಕೆ           ಬರಲಾಗಿದೆ.



ಕಳೆದ ಅರ್ಧ ಶತಮಾನದಿಂದ ಹಳೇ ಮೈಸೂರು ಭಾಗದ ನೂರಾರು ಹಳ್ಳಿ ಪಟ್ಟಣಗಳಲ್ಲಿ ಹತ್ತು ಸಾವಿರಕ್ಕೂ ಮಿಗಿಲು ಸಂಗೀತ ನಾಟಕಗಳನ್ನು ನಿರ್ದೇಶಿಸಿರುವ ಬೆಂಗಳೂರಿನ ವಜ್ರಪ್ಪ ಬಿಡುವಿಲ್ಲದ ಹಾರ‌್ಮೊನಿಯಂ ಮೇಷ್ಟ್ರು (ಪೆಟಿಗಿ ಮಾಸ್ತರ). ಎಂಟು ಪೌರಾಣಿಕ ನಾಟಕಗಳನ್ನೂ ಅವರು ರಚಿಸಿದ್ದಾರೆ.



ಇಳಕಲ್ ಸಮೀಪದ ಗುಡೂರಿನ ಪ್ರಮೀಳಾ ಅವರು ಬಿ.ಆರ್.ಅರಿಷಿಣಗೋಡಿಯವರ ಹುಚ್ಚೇಶ್ವರ ನಾಟ್ಯಸಂಘ ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ ನಾಟಕ ಕಂಪೆನಿಗಳಲ್ಲಿ 40 ವರ್ಷ ಕಾಲ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸಿ                    ಜನಪ್ರಿಯರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.