ಗುರಿ ಸಾಧನೆಗೆ ಸತತ ಪರಿಶ್ರಮ ಅಗತ್ಯ

7

ಗುರಿ ಸಾಧನೆಗೆ ಸತತ ಪರಿಶ್ರಮ ಅಗತ್ಯ

Published:
Updated:

ಹಿರೇಕೆರೂರ: ಸತತ ಪರಿಶ್ರಮ, ಗುರುವಿನ ಆಶೀರ್ವಾದ ವಿದ್ಯಾರ್ಥಿಗಳ ಗುರಿ ಸಾಧನೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೋಹನ ನಾಗಮ್ಮನವರ ಹೇಳಿದರು.ತಾಲ್ಲೂಕಿನ ಹಂಸಭಾವಿ ಗ್ರಾಮದ ಮಹಾಂತಸ್ವಾಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಒಕ್ಕೂಟ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಈಗ ಎಲ್ಲ ಕಡೆ ಶಿಕ್ಷಣ ದೊರೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿಗೆ ಕಂಡು ಬರುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಮೃತ್ಯುಂಜಯ ವಿದ್ಯಾಪೀಠವು ಶ್ರೇಷ್ಠ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸ ರೂಢಿಸಿ ಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಶ್ರಮದಿಂದ ಮುಂದೆ ಬರಬೇಕು ಎಂದರು.ಎಂ.ವಿ. ಪೀಠದ ಸದಸ್ಯ ಎನ್.ಸಿ. ಅಕ್ಕಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತವಾದ ಶಕ್ತಿಯನ್ನು ಹೊರತೆಗೆದು ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.ಪದವಿ ಕಾಲೇಜು ಪ್ರಾಚಾರ್ಯ ಪಿ.ಜಿ.ಪತ್ರೆ, ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಪಾಠವನ್ನು ಮಾಡಿದರೆ ಸಾಲದು, ಅವರಿಗೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಹಾಗೂ ಜೀವನದ ಅನುಭವ ನೀಡುವ ಶಿಕ್ಷಣ ಕೊಡಬೇಕು ಎಂದು ಹೇಳಿದರು.ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಎಂ.ಸಿ. ಪಾಟೀಲ ಸ್ವಾಗತಿಸಿದರು. ನೇತ್ರಾ ಪ್ರಾರ್ಥನೆ ಹಾಡಿದರು. ಬಿ.ಎನ್. ಮಾನಿಬಣಕಾರ ವರದಿ ವಾಚಿಸಿದರು. ವೈ.ಕೆ. ದೊಡ್ಡ ಮಾಸ್ತಿ ನಿರೂಪಿಸಿದರು. ನಾಗರಾಜ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry