ಗುರುಕುಲ ಮಾದರಿ ಶಿಕ್ಷಣಕ್ಕೆ ಮೆಚ್ಚುಗೆ

7
ಕಲ್ಲಡ್ಕ: ಶ್ರೀರಾಮ ವಿದ್ಯಾ ಕೇಂದ್ರ `ಕ್ರೀಡೋತ್ಸವ'ದಲ್ಲಿ ಸಿ.ಎಂ. ಶೆಟ್ಟರ್

ಗುರುಕುಲ ಮಾದರಿ ಶಿಕ್ಷಣಕ್ಕೆ ಮೆಚ್ಚುಗೆ

Published:
Updated:

ಬಂಟ್ವಾಳ: `ದೇಶದಲ್ಲಿ ಸನಾತನ ಸಂಸ್ಕೃತಿಗೆ ಪೂರಕವಾಗಿ ಗುರುಕುಲ ಮಾದರಿ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ವಿವಿಧ ದೈಹಿಕ ಕಸರತ್ತು ತರಬೇತಿ ಹಾಗೂ ರಾಷ್ಟ್ರಭಕ್ತಿ ಉದ್ದೀಪನ ಗೊಳಿಸುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರವು ಮಾದರಿಯಾಗಿ ಬೆಳೆದು ಬಂದಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ವೇಳೆ ಇಲ್ಲಿನ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಶಿಸ್ತಿನ ಹೆಜ್ಜೆ ಕುರಿತಂತೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಇಲ್ಲಿನ ನೂರಾರು ಮಂದಿ ವಿದ್ಯಾರ್ಥಿಗಳು ಏಕಕಾಲದಲ್ಲಿ ನಡೆಸಿದ ಶಿಸ್ತುಬದ್ಧ ಆಕರ್ಷಕ ಸಂಚಲನ, ಶಿಶುನೃತ್ಯ, ಘೋಷ್, ಜಡೆ ಕೋಲಾಟ, ನಿಯುದ್ಧ, ಕತ್ತಲು-ಬೆಳಕಿನ ಆಟದಲ್ಲಿ ನಡೆದ ದೀಪಾರತಿ, ಯೋಗಾಸನ, ಮಲ್ಲಕಂಬ, ನೃತ್ಯ ಭಜನೆ, ಯಕ್ಷರೂಪಕ, ಜನಪದ ನೃತ್ಯ, ದ್ವಿಚಕ್ರ ಸಮತೋಲನ, ಛತ್ರ ಚಾಮರ, ಬೆಂಕಿ ಸಾಹಸ, ಕೂಪಿಕಾ ಸಮತೋಲನ ಮತ್ತಿತರ ದೈಹಿಕ ಕಸರತ್ತುಗಳು ಜನಾಕರ್ಷಣೆ ಪಡೆಯಿತು.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ಉಪಾಧ್ಯಕ್ಷ ಎನ್.ಯೋಗೀಶ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಚಿತ್ರನಟಿ ತಾರಾ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಲ್ಲಿಕಾ ಆರ್.ಪ್ರಸಾದ್, ಕೆ.ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮೂಡ ಅಧ್ಯಕ್ಷ ಎಸ್.ರಮೇಶ್, ಶ್ರೀಕರ ಪ್ರಭು, ಎನ್.ಬಿ.ಅಬೂಬಕ್ಕರ್, ರಾಮಚಂದ್ರ ಗಾಣಿಗ, ರಾಮಚಂದ್ರ ಬೈಕಂಪಾಡಿ, ಎಸ್.ಆರ್.ರಂಗಮೂರ್ತಿ, ಎಂ.ಬಿ.ಪುರಾಣಿಕ್, ಕೆ.ಎಸ್.ನಿತ್ಯಾನಂದ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry