ಗುರುಗ್ರಹ: ಇಂದು ಬರಿಗಣ್ಣಿಗೆ ಗೋಚರ

7

ಗುರುಗ್ರಹ: ಇಂದು ಬರಿಗಣ್ಣಿಗೆ ಗೋಚರ

Published:
Updated:

ನವದೆಹಲಿ (ಪಿಟಿಐ): ಬಾನಂಗಳದಲ್ಲಿ ಸೋಮವಾರ ರಾತ್ರಿ ಅಚ್ಚರಿಯ ವಿದ್ಯ ಮಾನವೊಂದು ಸಂಭವಿಸಲಿದ್ದು ಸೂರ್ಯನ ನಂತರ ಸೌರಮಂಡಲದ ಅತ್ಯಂತ ದೊಡ್ಡ ಸದಸ್ಯನಾದ ಗುರು ಗ್ರಹ ಅತ್ಯಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸಲಿದೆ.

ಸುತ್ತಲೂ ಸುಂದರವಾದ ಉಂಗುರಗಳನ್ನು ಹೊಂದಿರುವ ಗುರು ಗ್ರಹ ಸೋಮವಾರ ರಾತ್ರಿ ಭೂಮಿಗೆ ಅತ್ಯಂತ ಸಮೀಪಕ್ಕೆ ಬರಲಿದ್ದು ಉಳಿದ ದಿನಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳ ಲಿದೆ. ಸೂರ್ಯಾಸ್ತದ ಬಳಿಕ ಈಶಾನ್ಯ ದಿಕ್ಕಿನಲ್ಲಿ ಬರಿಗಣ್ಣಿನಿಂದ ಅಚ್ಚರಿಯನ್ನು ವೀಕ್ಷಿಸಬಹುದಾಗಿದೆ.

ಅತಿ ಹೆಚ್ಚು ಉಪ ಗ್ರಹಗಳನ್ನು ಹೊಂದಿರುವ ಈ ಗ್ರಹ ಇಡೀ ರಾತ್ರಿ ಬರಿಗಣ್ಣಿಗೆ ಗೋಚರಿಸ ಲಿದ್ದು, ಮಧ್ಯರಾತ್ರಿಯ ನಂತರ ದಕ್ಷಿಣ ದಿಕ್ಕಿನತ್ತ ಚಲಿಸಲಿದೆ. ಈ ಸಂದರ್ಭದಲ್ಲಿ ಗುರು, ಸೂರ್ಯನಿಗೆ ನೇರವಾಗಿ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾನೆ. ಪ್ರತಿ 13 ತಿಂಗಳಿಗೊಮ್ಮೆ ಇಂಥ ಘಟನೆ ಆಗಸದಲ್ಲಿ ಸಂಭ ವಿಸುತ್ತದೆ.

ಕಳೆದ ಬಾರಿ 2011ರ ಅಕ್ಟೋಬರ್ 11ರಂದು ಇಂಥ ಘಟನೆ ಸಂಭವಿಸಿತ್ತು. ಮತ್ತೆ ಇಂಥ ಅಪರೂಪದ ವಿದ್ಯಮಾನವನ್ನು ವೀಕ್ಷಿಸಲು 2014ರ ಜನವರಿ 6ರವರೆಗೆ ಕಾಯಬೇಕಾಗುತ್ತದೆ ಎಂದು ಭಾರತೀಯ ಸೌರಮಂಡಲ ಸಂಘದ ಎನ್. ಶ್ರೀರಘುನಂದನ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಗುರುಗ್ರಹ ಭೂಮಿಗೆ ಸಮೀಪ ಬಂದಿರುತ್ತಾನೆ. ಅಂದು ಭೂಮಿಯಿಂದ ಕೇವಲ 60.8 ಕೋಟಿ ಕಿ.ಮೀ. ದೂರದಲ್ಲಿರುವ ಗುರು ಉಳಿದ ದಿನಗಳಲ್ಲಿ 96.7 ಕೋಟಿ ಕಿ.ಮೀ. ದೂರದಲ್ಲಿರುತ್ತಾನೆ. ಭೂಮಿಗೆ 58.8 ಕೋಟಿ ಕಿ.ಮೀ. ಸಮೀಪಕ್ಕೆ ಬಂದ ನಿದರ್ಶನಗಳು ಇವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry