ಶುಕ್ರವಾರ, ಆಗಸ್ಟ್ 23, 2019
21 °C

ಗುರುದ್ವಾರದ ಮೇಲಿನ ದಾಳಿ: ಸ್ಮರಣೆಗೆ ಅಮೆರಿಕ ಸೆನೆಟ್ ನಿರ್ಣಯ

Published:
Updated:

ವಾಷಿಂಗ್ಟನ್ (ಪಿಟಿಐ): ವಿಸ್ಕಾನ್ಸಿನ್ ಗುರುದ್ವಾರದ ಮೇಲೆ ಬಿಳಿಯರ ಪ್ರತಿಪಾದಕ ವೇಡ್ ಮೈಕೆಲ್ ಪೇಜ್ ಎಸಗಿದ ದುಷ್ಕೃತ್ಯವನ್ನು ಖಂಡಿಸಿ ಅಮೆರಿಕದ ಸೆನೆಟ್ ಒಕ್ಕೊರಲಿನಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ.ನಿರ್ಣಯವನ್ನು ಸೆನೆಟರ್‌ಗಳಾದ ವಿಸ್ಕಾನ್ಸಿನ್ ಪ್ರಾಂತದ ಟ್ಯಾಮಿ ಬಾಲ್ಡ್‌ವಿನ್ ಹಾಗೂ ರಾನ್ ಜಾನ್ಸನ್ ಮಂಡಿಸಿದರು. ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸೆನೆಟ್, ಸಂತ್ರಸ್ತ ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರಿಗೆ ಸಾಂತ್ವನ ಹೇಳಿತು.2012ರ ಆಗಸ್ಟ್ 5ರಂದು ಓಕ್ ಕ್ರೀಕ್‌ನ ವಿಸ್ಕಾನ್ಸಿನ್‌ಗುರುದ್ವಾರದಲ್ಲಿ ನಡೆದ ಈ ಘಟನೆಯಲ್ಲಿ ಆರು ಮಂದಿ ಸಿಖ್ಖರು ಮಡಿದಿದ್ದರು.

Post Comments (+)