ಗುರುಮಠಕಲ್: ಮಳೆ ಅಸ್ತವ್ಯಸ್ತ

7

ಗುರುಮಠಕಲ್: ಮಳೆ ಅಸ್ತವ್ಯಸ್ತ

Published:
Updated:

ಗುರುಮಠಕಲ್: ಪಟ್ಟಣದಲ್ಲಿ ಎರಡು ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.ಮಂಗಳವಾರ ಸಂಜೆ 4 ಗಂಟೆಯಿಂದ ಸುರಿದ ಮಳೆಯಿಂದಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಯಿತು.ಮಳೆ ನೀರು ಇಲ್ಲಿನ ಬನಶಂಕರಿ ಗ್ಯಾಸ್ ಎಜೆಂಸ್ಸಿಯಲ್ಲಿ ನೀರು ತಿಂಬಿದ್ದು ನೀರು ಹೊರ ಹಾಕಲು ಹರಸಾಹಸ ಪಡಬೇಕಾಯಿತು. ಮಂಗಳವಾರ 6.4 ಸೆಂಟಿ ಮೀಟರ್ ಮತ್ತು ಬುಧವಾರ 4.4 ಸೆಂಟಿ ಮೀಟರ್ ಮಳೆ ದಾಖಲಾಗಿದೆ.ಈ ಬಾರಿಯ ಮಳೆಗಾಲ ಪ್ರಾರಂಭವಾದಾಗಿನಿಂದ ಇದೇ ಈ ಎರಡು ದಿನದ ಮಳೆಯೇ ದೊಡ್ಡ ಮಳೆ ಎಂದು ಹೇಳಬಹುದಾಗಿದೆ. ಮಳೆ­ಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ.ಬಿಸಿಲ ಬೆಗೆಗೆ ಬಾಯಿತೆರೆದು ನಿಂತಿರುವ ಕೆರೆಗಳಿಗೆ ಜೀವ ಕಳೆ ಬಂದಂತ್ತಾಗಿದೆ.ಎರಡು ದಿನ ಸುರಿದ ಮಳೆಯಿಂದಾಗಿ. ಕೆಲ ಕೆರೆಗಳಿಗೆ ಅಲ್ಪ ಮಟ್ಟಿಗೆ ನೀರು ಬಂದರೆ ಇನ್ನು ಕೆಲ ಕೆರೆಗಳು ತುಂಬಿವೆ.ಬೇಸಿಗೆ ಕಾಲಕ್ಕೆ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದು ಎಂಬ ಭರವಸೆ ರೈತರಲ್ಲಿ ಮೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry