ಗುರುವಾಯೂರಿನಲ್ಲಿ ಯಡಿಯೂರಪ್ಪ ಪೂಜೆ

ಗುರುವಾರ , ಜೂಲೈ 18, 2019
22 °C

ಗುರುವಾಯೂರಿನಲ್ಲಿ ಯಡಿಯೂರಪ್ಪ ಪೂಜೆ

Published:
Updated:

ಗುರುವಾಯೂರು, ಕೇರಳ (ಪಿಟಿಐ): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಕೇರಳದ ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ ದೇವಸ್ಥಾನಕ್ಕೆ  ಆಗಮಿಸಿದ ಯಡಿಯೂರಪ್ಪ ಅವರನ್ನು ದೇವಾಲಯದ ಆಡಳಿತಾಧಿಕಾರಿ ಕೆ.ಎನ್. ರಘುನಾಥನ್ ಮತ್ತು ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. ಪೂಜೆ ಬಳಿಕ ಬೆಣ್ಣೆಯ ತುಲಾಭಾರ ಸೇವೆ ಸಲ್ಲಿಸಿದ ಅವರು ನಂತರ ಬೆಂಗಳೂರಿಗೆ ಮರಳಿದರು.ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್ ಆರ್ಯವೈದ್ಯಶಾಲಾದಲ್ಲಿ ಯಡಿಯೂರಪ್ಪ ಜೂನ್ 13ರಿಂದ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry