ಗುರುವಾರ ಬ್ಯಾಂಕ್ ಮುಷ್ಕರ

7

ಗುರುವಾರ ಬ್ಯಾಂಕ್ ಮುಷ್ಕರ

Published:
Updated:

ಮುಂಬೈ (ಐಎಎನ್‌ಎಸ್): 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಗುರುವಾರ ದೇಶದಾದ್ಯಂತ 7 ಲಕ್ಷ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದು, ಅಂದು ಬಹುತೇಕ ಸರ್ಕಾರಿ, ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳ ವಹಿವಾಟು ಸ್ಥಗಿತಗೊಳ್ಳಲಿದೆ.ಸಾರ್ವಜನಿಕ ವಲಯದ 27 ಬ್ಯಾಂಕ್‌ಗಳು, 12 ಖಾಸಗಿ ಬ್ಯಾಂಕ್‌ಗಳು ಹಾಗೂ ಎಂಟು ವಿದೇಶಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಗುರುವಾರ ಸ್ಥಗಿತಗೊಳ್ಳಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆಯ ಕಾರ್ಯದರ್ಶಿ ವಿಶ್ವಾಸ್ ಉಟಗಿ ತಿಳಿಸಿದ್ದಾರೆ.`1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊರಟಿದೆ. ಈ ತಿದ್ದುಪಡಿ ತಂದಲ್ಲಿ ದೇಶೀಯ ಖಾಸಗಿ ಬ್ಯಾಂಕ್‌ಗಳು ಬಹುರಾಷ್ಟ್ರೀಯ ಬ್ಯಾಂಕ್‌ಗಳ ಪಾಲಾಗಲಿವೆ. ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಸಗಿ ಹಾಗೂ ವಿದೇಶಿ ಹೂಡಿಕೆ ಹೆಚ್ಚಲಿದೆ.'`ಬ್ಯಾಂಕ್‌ಗಳ ವಿಲೀನ, ಸ್ವಾಧೀನ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಹೊಸ ಬ್ಯಾಂಕ್‌ಗಳ ಆರಂಭಕ್ಕೆ ಉದ್ಯಮ ಸಮೂಹಗಳಿಗೆ ಪರವಾನಗಿ ನೀಡುವುದು ಇತ್ಯಾದಿಗಳಿಗೆ ಈ ತಿದ್ದುಪಡಿ ದಾರಿ ಮಾಡಿಕೊಡಲಿದೆ.' ಎಂದೂ ಉಟಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry