ಭಾನುವಾರ, ಅಕ್ಟೋಬರ್ 20, 2019
22 °C

ಗುರುವಾರ, 12-1-1962

Published:
Updated:

ಸ್ಪರ್ಧೆಯಿಂದ ಇಬ್ಬರು ಅಭ್ಯರ್ಥಿಗಳು ವಾಪಸ್

ಬೆಂಗಳೂರು, ಜ. 11
- ವಿಧಾನ ಸಭೆಯ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀ ಎ. ಭೀಮಪ್ಪ ನಾಯಕ್ ಮತ್ತು ಮಂಗಳೂರು (1) ಕ್ಷೇತ್ರದ ಅಭ್ಯರ್ಥಿ ಶ್ರೀ ಕೆ. ಸೂರ್ಯನಾರಾಯಣ ಅಡಿಗ ಅವರು ಅನಾರೋಗ್ಯ ಕಾರಣ ಸ್ಪರ್ಧಿಸಲು ಸಾಧ್ಯವಾಗದೆಂದು ತಿಳಿಸಿದ್ದಾರೆಂದು ಎಂ. ಪಿ. ಸಿ. ಸಿ. ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.ಮೇಯರ್ ಸ್ಥಾನಕ್ಕೆ ಶ್ರೀ ಕೃಷ್ಣಯ್ಯರ್

ಬೆಂಗಳೂರು, ಜ. 11
- ಇಂದು ಬೆಳಿಗ್ಗೆ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಪೊರೇಷನ್ ಕಾಂಗ್ರೆಸ್ ಸದಸ್ಯರ ಸಭೆ ಈ ವರ್ಷದ ಮೇಯರ್ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಪ್ರಕೃತ, ಪಕ್ಷದ ನಾಯಕರಾಗಿರುವ ಶ್ರೀ ವಿ. ಎಸ್. ಕೃಷ್ಣಯ್ಯರ್ ಅವರನ್ನು ಸರ್ವಾನುಮತದಿಂದ ಮೈಸೂರು ಪ್ರದೇಶ ಕಾಂಗ್ರೆಸ್ ಪಾರ್ಲಿಮೆಂಟರಿ ಸಮಿತಿಗೆ ಶಿಫಾರಸು ಮಾಡಿತು.

Post Comments (+)