ಮಂಗಳವಾರ, ಮೇ 11, 2021
20 °C

ಗುರುವಾರ, 20-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀಣದ ಶಾಂತಿಪ್ರಿಯತೆಯ ಸೋಗು: ದೆಹಲಿ ಖಂಡನೆ

ನವದೆಹಲಿ, ಜೂನ್ 19- ಚೀಣಿ ಸರ್ಕಾರ ವ್ಯಕ್ತಪಡಿಸಿರುವ ಶಾಂತಿಯ ಬಯಕೆ ಮತ್ತು ಭಾರತ -ಚೀಣ ಗಡಿ ಪ್ರಶ್ನೆಯು ಶಾಂತಿಯುತವಾಗಿ ಪರಿಹಾರವಾಗಬೇಕೆಂಬ ಇಚ್ಛೆ ಕೇವಲ ಪೀಕಿಂಗ್‌ನ ಗುಪ್ತ ಹವಣಿಕೆಗಳಿಗೆ ರಕ್ಷೆಯಾಗಿವೆಯಷ್ಟೇ ಎಂದು ಭಾರತ ಸರ್ಕಾರ ಚೀಣಿ ಸರ್ಕಾರಕ್ಕೆ ತಿಳಿಸಿದೆ.ಅಂತರಿಕ್ಷ ಯಾತ್ರಿಕರ ಸುರಕ್ಷಿತ ವಾಪಸಾತಿ 

ಮಾಸ್ಕೊ, ಜೂನ್ 19 -  ರಷ್ಯದ ವೋಸ್ಟಾಕ್ 5 ಮತ್ತು 6 ಉಪಗ್ರಹ ಗಳೆರಡೂ ಭೂಮಿಗಿಳಿದಿವೆಯೆಂದು ಇಂದು ಪ್ರಕಟಿಸಲಾಯಿತು. ಗಗನ ಯಾತ್ರಿಗಳಾದ ವ್ಯಾಲೆರಿ ಬೈಕೋವ್‌ಸ್ಕಿ ಮತ್ತು ಟೆರೆಪ್ಕೋವ ಇಬ್ಬರೂ ಮೊದಲೇ ಗೊತ್ತಾಗಿದ್ದ ಸ್ಥಳದಲ್ಲಿ ಭೂಮಿಗಿಳಿದರು.ರೈಲ್ವೆ ಕಚೇರಿ ವರ್ಗಾವಣೆ: ಕೇಂದ್ರಕ್ಕೆ ಮುಖ್ಯಮಂತ್ರಿ ಪತ್ರ

ಬೆಂಗಳೂರು, ಜೂನ್ 19 - ಹಾಸನ - ಮಂಗಳೂರು ರೈಲ್ವೆ ನಿರ್ಮಾಣ ಸರ್ವೆಕಾರ್ಯದ ಸಂಬಂಧದಲ್ಲಿ ಹಾಸನದಲ್ಲಿದ್ದ ಸದರನ್ ರೈಲ್ವೆಯ ವಿಭಾಗ ಕಚೇರಿಯನ್ನು ಬೇರೆ ಕಡೆಗೆ ವರ್ಗಾಯಿಸಿರುವುದರಿಂದ ನಿರ್ಮಾಣದ ಕಾರ್ಯ ವಿಳಂಬವಾಗಬಹುದೆಂದು ಹಾಸನದ ಜನರು ಕಳವಳಗೊಂಡು ತಮಗೆ ಪತ್ರ ಬರೆದಿರುವರಲ್ಲದೆ, ತಂತಿಗಳನ್ನೂ ಕಳುಹಿಸಿದ್ದಾರೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವರದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.