ಬುಧವಾರ, ಜೂನ್ 23, 2021
24 °C

ಗುರುವಾರ, 22-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ - ಚೀಣ ಗಡಿ ವಿವಾದ ಪಂಚಾಯಿತಿಗೆ

ನವದೆಹಲಿ, ಮಾ. 21
- ಚೀಣ - ಭಾರತ ಗಡಿ ವಿವಾದದ ಅಥವ ಇನ್ನಾವುದೇ ಪ್ರಶ್ನೆಯ ಸಂಬಂಧದಲ್ಲಿ, ಪಂಚಾಯಿತಿ ಕ್ರಮವನ್ನು ತಾತ್ವಿಕವಾಗಿ ತಾವು ತಳ್ಳಿಹಾಕಲು ಸಾಧ್ಯವಿಲ್ಲವಾದರೂ ರೂಢಿಯಲ್ಲಿ ಇಂಥ ಪಂಚಾಯಿತಿ ಕ್ರಮವು ಅನೇಕ ಅಂಶಗಳನ್ನು ಅವಲಂಬಿಸಿರುವುದೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪಂಚಾಯ್ತಿಗೆ ಒಪ್ಪಿಸುವ ಮೂಲಕ ಭಾರತ - ಚೀಣ ಗಡಿ ವಿವಾದವನ್ನು ಬಗೆಹರಿಸಬೇಕೆಂದು ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಮಂಡಿಸಿರುವ ಸಲಹೆ ಬಗ್ಗೆ ಶ್ರೀ ನೆಹರೂ ಈ ಪ್ರಕ್ರಿಯೆ ವ್ಯಕ್ತಪಡಿಸಿದರು.ಒಂದೆರಡು ದಿನ ತಡಮಾಡಲು ಹೈಕಮಾಂಡ್ ಸಲಹೆ

ಬೆಂಗಳೂರು, ಮಾ. 21
- ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ಉಳಿದ ಸಚಿವರು ಹಾಗೂ ಉಪಸಚಿವರ ಪಟ್ಟಿಯನ್ನು ಪ್ರಕಟಿಸಲಿಲ್ಲ.ಸಂಜೆ 4 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಪ್ರಕಟಿಸದಿರುವುದಕ್ಕೆ ಪಟ್ಟಿಯನ್ನು ಪ್ರಕಟಿಸಲು `ಒಂದೆರಡು ದಿನ ತಾಳಿ~ ಎಂದು ಹೇಳಿದರು. ಇದಕ್ಕೆ ಹೈಕಮಾಂಡ್ ನೀಡಿದ ಸಲಹೆ ಕಾರಣವೆಂದು ಪಕ್ಷದ ವಲಯಗಳಿಂದ ತಿಳಿದು ಬಂದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.