ಶುಕ್ರವಾರ, ಮೇ 7, 2021
26 °C

ಗುರುವಾರ, 6-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ರಕ್ಷಣೆ ಮಹತ್ವದ್ದು:

ವಾಷಿಂಗ್ಟನ್, ಜೂನ್ 5 - ಭಾರತ - ಪಾಕಿಸ್ತಾನ್ ಉಪಖಂಡದಲ್ಲಿ ಚೀಣದ ದುರಾಕ್ರಮಣಕಾರಿ ಪ್ರಯತ್ನಗಳನ್ನು ತಡೆಗಟ್ಟುವ ಬಗ್ಗೆ ಭಾರತ, ಅಮೆರಿಕಗಳ ರಕ್ಷಣಾತ್ಮಕ ಗಮನ ಮತ್ತು ಏಷ್ಯದಲ್ಲೂ ವಿಶ್ವದಲ್ಲೂ ಶಾಂತಿ ಸುಭದ್ರತೆಗಳು ನೆಲಸಿರಬೇಕಾದ ದೃಷ್ಟಿಯಿಂದ ಭಾರತದ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಗಳನ್ನು ರಕ್ಷಿಸುವುದರ ಮಹತ್ವ ಇವನ್ನು ರಾಷ್ಟ್ರಪತಿ ರಾಧಾಕೃಷ್ಣನ್ ಮತ್ತು ಅಧ್ಯಕ್ಷ ಕೆನೆಡಿ ನಿನ್ನೆ ಸಂಜೆ ಇತ್ತ ಸಂಯುಕ್ತ ಪ್ರಕಟಣೆಯೊಂದರಲ್ಲಿ ಒತ್ತಿ ಹೇಳಿದ್ದಾರೆ.

ಅಯೂಬ್ ತಿರಸ್ಕಾರ

ರಾವಲ್ಪಿಂಡಿ, ಜೂನ್ 5 - ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ನಡೆಯಲೆಂಬ ಪಶ್ಚಿಮ ರಾಷ್ಟ್ರಗಳ ಸೂಚನೆಯನ್ನು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್‌ರವರು ತಿರಸ್ಕರಿಸಿರುವಂತೆ ಭಾಸವಾಗುತ್ರಿದೆ.`ಮಧ್ಯಸ್ಥಿಕೆ ಪ್ರಯತ್ನದಿಂದ ಯಾವ ಉಪಯುಕ್ತ ಉದ್ಧೇಶವೂ ಸಾಧಿತವಾಗುವುದಿಲ್ಲ. ಭಾರತದ ಹಠಮಾರಿತನದಿಂದ ಈ ಪ್ರಯತ್ನಗಳು ಹಿಂದೆ ವಿಫಲಗೊಂಡವು' ಎಂದು ಸಾರ್ಗೋಡದಲ್ಲಿ ನಿನ್ನೆ ಬಹಿರಂಗ ಸಭೆಯೊಂದರಲ್ಲಿ ಅಯೂಬ್ ಹೇಳಿದರೆಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.