ಗುರುವಿನಲ್ಲಿ ದೇವರ ಕಾಣಬೇಕು

ಭಾನುವಾರ, ಜೂಲೈ 21, 2019
26 °C

ಗುರುವಿನಲ್ಲಿ ದೇವರ ಕಾಣಬೇಕು

Published:
Updated:

ಹುಬ್ಬಳ್ಳಿ: ಭಾರತ ದೇಶ ಅಧ್ಯಾತ್ಮ ಸಂಪನ್ನವಾದ ದೇಶ. ದೇವರನ್ನು ನಂಬುವ ಸುಸಂಸ್ಕೃತ ಜನ. ಕಣ್ಣಿಗೆ ದೇವರು ಕಾಣದೇ ಇದ್ದರೂ ಗುರುವಿನ ಮೂಲಕ ದೇವರನ್ನು ಸಾಕ್ಷಾತ್ಕರಿಸಿಕೊಂಡ ದೇಶ ನಮ್ಮದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಹೇಳಿದರು.ಅವರು ಮರಾಠಗಲ್ಲಿಯಲ್ಲಿರುವ ಸಿದ್ಧಾರೂಢ ಸೆಂಟರ್ ವಾಣಿಜ್ಯ ಸಂಕೀರ್ಣ, ಮಠದ ಆವರಣದಲ್ಲಿ ಭಕ್ತ ನಿಲಯ ಕಟ್ಟಡಕ್ಕೆ ಗುರುವಾರ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.ಜನಕಲ್ಯಾಣಕ್ಕಾಗಿ ಮಠಗಳು ಶ್ರಮಿಸಬೇಕು. ಆ ನಿಟ್ಟಿನಲ್ಲಿ ಸಿದ್ಧಾರೂಢ ಮಠ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಆಗಿದೆ ಎಂದು ಪ್ರಶಂಶಿಸಿದರು.ದೇವರ ಹುಬ್ಬಳ್ಳಿ ಸಿದ್ಧಾಶ್ರಮದ ಸಿದ್ಧಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ನಗರದ ನಾಶಿಕ್‌ಶರಣಪ್ಪನ ಮಠದ ವಾಸುದೇವಾನಂದ ಸ್ವಾಮೀಜಿ, ರಾಯಚೂರು ನಿಜಾನಂದ ಸ್ವಾಮೀಜಿ ಉಪಸ್ಥಿತರಿದ್ದರು.ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಂದ್ರ ಸಿಂಘಿ ಅಧ್ಯಕ್ಷತೆ ವಹಿಸಿದ್ದರು. ಮಠದ ಆಡಳಿತಾಧಿಕಾರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಕೆ.ನಟರಾಜನ್, ಗೌರವ ಕಾರ್ಯದರ್ಶಿ ರಂಗಾಬದ್ದಿ, ಧರ್ಮದರ್ಶಿಗಳಾದ ಆರ್.ಜಿ.ನಲವಡಿ, ಮಹಾದೇವ ಬಾಗೇವಾಡಿ, ಕೆ.ಎಲ್.ಪಾಟೀಲ, ಶ್ಯಾಮಾನಂದ ಪೂಜಾರಿ, ಬಿ.ವಿ.ಸೋಮಾಪುರ, ಡಾ. ಆರ್.ಎನ್.ಜೋಶಿ, ಡಾ.ಗೋವಿಂದ ಮಣ್ಣೂರು, ಬಾಳು ಮಗಜಿಕೊಂಡ, ಗಿರಿಧರ ನಾಯ್ಕ, ಜಿ.ಜಿ.ಕಮ್ಮಾರ, ಟಿ.ಬಿ.ಪೋಳ, ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಹಾಜರಿದ್ದರು.

ಸದಾನಂದ ಬೆಂಡಿಗೇರಿ ಪ್ರಾರ್ಥಿಸಿದರು. ಪ್ರಭುದೇವ ಹಿಪ್ಪರಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry