ಗುರುವಿನ ಸ್ಥಾನ ದೊಡ್ಡದು: ಲಕ್ಷ್ಮೀದೇವಿ

7

ಗುರುವಿನ ಸ್ಥಾನ ದೊಡ್ಡದು: ಲಕ್ಷ್ಮೀದೇವಿ

Published:
Updated:

ಹನುಮಸಾಗರ: ಸಮಾಜದಲ್ಲಿ ಗುರುವಿನ ಸ್ಥಾನಮಾನ ಅತ್ಯೂನ್ನತವಾದದ್ದು ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ ಹೇಳಿದರು.ಶುಕ್ರವಾರ ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದ ಪರವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್‌ಕರೀಂ ವಂಟೆಳಿ ಮಾತನಾಡಿ ತಾ.ಪಂ ಹಾಗೂ ಜಿ.ಪಂ. ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಯಾಗಿರುವ ನಮ್ಮ ಜನಪ್ರತಿನಿಧಿಗಳು ಸ್ಥಳೀಯವಾಗಿ ಚಿರಪರಿಚಿತವಾದ ವ್ಯಕ್ತಿಗಳಾಗಿದ್ದು, ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸಿ  ಹೊಸ ಯೋಜನೆಗಳತ್ತ ಅವರು ಗಮನಹರಿಸುವರೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.ತಾಲ್ಲೂಕ ನೌಕರರ ಸಂಘದ ಖಜಾಂಚಿ ಮಹಾಂತೇಶ ಗೋನಾಳ ಮಾತನಾಡಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಈ ಭಾಗದಲ್ಲಿ ವಿದ್ಯಾರ್ಥಿಗಳ ನಿಂತರ ಗೈರುಹಾಜರಿಯಿಂದಾಗಿ ನಿರೀಕ್ಷಿತ ಸಾಮರ್ಥ್ಯದಲ್ಲಿ ಮಕ್ಕಳ ಕಲಿಕೆ ಕಂಡು ಬರುತ್ತಿಲ್ಲ, ಜೊತೆಗೆ ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳ ಅವಶ್ಯಕತೆಯೂ ಇದೆ ಎಂದು ಹೇಳಿದರು.ಗುತ್ತಿಗೆದಾರ ಬಸವರಾಜ ಹಳ್ಳೂರ ಮಾತನಾಡಿ ಈಗಾಗಲೇ ಹಲವಾರು ಸಮಸ್ಯೆಗಳನ್ನು ಅರಿತುಕೊಂಡಿದ್ದು ಅವುಗಳಿಗೆ ಹೊಸ ಯೋಜನೆ ಹಾಕಿಕೊಳ್ಳುವ ವಿಚಾರದಲ್ಲಿದ್ದೇವೆ ಈ ಐದು ವರ್ಷಗಳ ನಮ್ಮ ಅವಧಿಯಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಹಾಕಿಕೊಂಡು ಈ ಭಾಗ ಅಭಿವೃದ್ಧಿಪಡಿಸಲು ಯತ್ನಿಸುತ್ತೇವೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ತಾ.ಪಂ ಸದಸ್ಯ ಹನುಮಂತಪ್ಪ ರಾಠೋಡ ಇವರನ್ನು ಸಿಆರ್‌ಸಿ ಪರವಾಗಿ  ಸನ್ಮಾನಿಸಲಾಯಿತು.ಶಿಕ್ಷಕ ಸಂಘದ ನಿರ್ದೇಶಕ ಮಹಾಂತೇಶ ಉಗರಗೋಳ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ರಾಮನಗೌಡ ಪಾಟೀಲ, ಬಸಪ್ಪ ನಂದಾಪೂರ ಮಾತನಾಡಿದರು. ತಾಲ್ಲೂಕ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ವಿಜಯಕುಮಾರ ಜಾಲಿಹಾಳ, ಶಿಕ್ಷಕ ಸಂಘದ ನಿರ್ದೇಶಕ ಅಮರೇಗೌಡ ಪಾಟೀಲ, ಖಾಸಿಂಸಾಬ ಬಂಗಾರಗುಂಡು, ಸದಾನಂದಯ್ಯ ಹಿರೇಮಠ ಇತರರು ಇದ್ದರು.ಜ್ಯೋತಿ ಪಟಗಾರ ಪ್ರಾರ್ಥಿಸಿದರು, ಸುಭಾಸಗೌಡ್ರ ಸ್ವಾಗತಿಸಿದರು, ಖಾಜಾಹುಸೇನ ವಂಟೆಳಿ ಕಾರ್ಯಕ್ರಮ ನಿರೂಪಿಸಿದರು, ಬಸಪ್ಪ ಬಂಡಿವಡ್ಡರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry