ಗುರುಸ್ಮರಣೆ ಸಂಗೀತೋತ್ಸವ

7

ಗುರುಸ್ಮರಣೆ ಸಂಗೀತೋತ್ಸವ

Published:
Updated:

ಡಾ. ಪಂ. ಪುಟ್ಟರಾಜ ಗವಾಯಿ ಸಂಗೀತ ಸಂಸ್ಥೆಯು ಶನಿವಾರ ಮೇ 12ರಂದು `ಗುರುಸ್ಮರಣೆ ಸಂಗೀತೋತ್ಸವ~ವನ್ನು ಹಮ್ಮಿಕೊಂಡಿದೆ.ಸಮಾರಂಭವನ್ನು ಗಾಯಕಿ ಮಂಜುಳಾ ಗುರುರಾಜ್ ಅವರು ಉದ್ಘಾಟಿಸಲಿದ್ದಾರೆ.ಸೆಂಚುರಿ ಬಿಲ್ಡರ್ಸ್‌ನ ಡಾ. ದಯಾನಂದ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಶಾಸಕ ಡಾ. ಸಿ. ಅಶ್ವತ್ಥ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಟಿ. ಮುನಿರಾಜಯ್ಯ, ಗಾಯಕರಾದ ಎಂ. ಎಸ್. ಕಾಮತ್, ನಾಗಲಿಂಗಯ್ಯ ವಸ್ತ್ರದಮಠ, ದೇವೇಂದ್ರ ಕುಮಾರ ಪತ್ತಾರ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕ ಲಕ್ಷ್ಮಣ ಕಲ್ಲಹಿಪ್ಪರಗಿ ಅವರನ್ನು ಸನ್ಮಾನಿಸಲಾಗುವುದು.

ಮಧ್ಯಾಹ್ನ 3ರಿಂದ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ. ಪಿ. ಅನೀಶ್ ನಾಯಕ್ (ತಬಲಾ), ನೀಲಯ್ಯ ಹೆಬಳಿ (ಹಾರ್ಮೋನಿಯಂ), ಕೇದಾರನಾಥ್ ಫುಲಾರಿ (ತಬಲಾ).ಸಂಜೆ 6ಕ್ಕೆ ತಬಲಾ ವಾದಕ ಉಸ್ತಾದ್ ಶಬೀರ್ ನಿಸಾರ್ ಅವರಿಂದ ತಬಲಾ ಸೋಲೊ. ರವೀಂದ್ರ ಯಾವಗಲ್ ಅವರ ಸಾಥ್. ಹಿಂದೂಸ್ತಾನಿ ಗಾಯಕ ಬಸವಕುಮಾರ ಮರಡೂರ ಅವರಿಂದ ಗಾಯನ. ಸತೀಶ್ ಕೊಳ್ಳಿ (ಹಾರ್ಮೋನಿಯಂ), ಸರ್ಫರಾಜ್ ಖಾನ್ (ಸಾರಂಗಿ), ಗುಂಡಪ್ಪ ಕಲ್ಲಹಿಪ್ಪರಗಿ (ಗಾಯನ), ರಾಮಚಂದ್ರ ಕಲ್ಲಹಿಪ್ಪರಗಿ (ತಬಲಾ).

ಸ್ಥಳ: ಕಾಶೀಮಠ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry