ಶುಕ್ರವಾರ, ಜೂನ್ 25, 2021
26 °C

ಗುರು ಗ್ರಂಥ ಸಾಹಿಬ ಕನ್ನಡಕ್ಕೆ ಅನುವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟಿಂಡಾ (ಪಂಜಾಬ್): ಮೂಲತಃ ಕನ್ನಡಿಗ ಪಂಡಿತ್ ರಾವ್ ಧರೆಣ್ಣವರ್ ಅವರು ಸಿಖ್ಖರ ಪವಿತ್ರ ಗ್ರಂಥ ಗುರು  ಗ್ರಂಥ ಸಾಹಿಬ್‌ವನ್ನು ಕನ್ನಡ ಭಾಷೆಗೆ ಅನುವಾದಿಸಲು ತೊಡಗಿದ್ದಾರೆ.ಇಲ್ಲಿ ನಡೆದ ಪಂಜಾಬಿ ಭಾಷಾ ಸಮಾವೇಶದಲ್ಲಿ ಭಾಗವಹಿಸಲು ಬಂದ ಅವರು ಈಗಾಗಲೇ ಸಂತರಿಗೆ ಸಂಬಂಧಿಸಿದ ಎಂಟು ಕೃತಿಗಳನ್ನು ಕನ್ನಡದಿಂದ ಪಂಜಾಬಿ ಭಾಷೆಗೆ ಅನುವಾದಿಸಿದ್ದು ಅವುಗಳಲ್ಲಿ ಎರಡನ್ನು ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್ ಅವರು  ಬಿಡುಗಡೆ ಮಾಡಿರುವುದಾಗಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಗೆ ಸೇರಿದ ಧರೆಣ್ಣವರ್ ಅವರು ಚಂಡೀಗಡದ ಸರ್ಕಾರಿ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಬೋಧಿಸುತ್ತಿದ್ದಾರೆ.ತಮ್ಮ ವಿದ್ಯಾರ್ಥಿಗಳೊಂದಿಗೆ ಸಂವಹನ ಸುಲಭವಾಗಿ ಆಗಲು ಪಂಜಾಬಿ ಭಾಷೆಯ ಜ್ಞಾನ ಅಗತ್ಯ ಎಂದು ಆ ಭಾಷೆ ಕಲಿತತೆ. ಈಗ ಪಂಜಾಬಿ ಸಾಹಿತ್ಯ ಓದಲು ಆರಂಭಿಸಿದ್ದೇನೆ. ಕನ್ನಡ ಕೃತಿಗಳನ್ನು ಪಂಜಾಬಿ ಭಾಷೆಯಲ್ಲಿ ಅನುವಾದಿಸುವ ಪ್ರಭುತ್ವ ಪಡೆದಿದ್ದೇನೆಂದು ಸುದ್ದಿಗಾರರಿಗೆ ತಿಳಿಸಿದರು. ಪವಿತ್ರಗ್ರಂಥವನ್ನು ಅನುವಾದಿಸಲು ಗುರ್ಮುಖಿಯನ್ನು ಕೂಡ ಕಲಿತಿದ್ದು ಇದು ಅನುವಾದಿಸಲು ನೆರವಾಗಿದೆ. ಗ್ರಂಥದ ಅನುವಾದಕ್ಕೆ ನಿತ್ಯ 4 ಗಂಟೆ  ಮೀಸಲಿಟ್ಟಿದ್ದೇನೆ ಎಂದಿದ್ದಾರೆ.  ಇನ್ನು ಒಂದು ವರ್ಷದಲ್ಲಿ ಇದನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.