ಶುಕ್ರವಾರ, ಜೂನ್ 18, 2021
22 °C

ಗುರು ಪರಿಕ್ರಮ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಖ್ಖರ ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು `ಗುರು ಪರಿಕ್ರಮ~ ಎಂಬ ವಿಶೇಷ ರೈಲು ಸೇವೆ ಒದಗಿಸುವುದಾಗಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ. ಈ ರೈಲು ಅಮೃತಸರ-ಪಟ್ನಾ-ನಾಂದೇಡ್ ಮಾರ್ಗದಲ್ಲಿ ಸಂಚರಿಸಲಿದೆ.ಹೊಸ ರೈಲುಗಳ ಸಂಚಾರವನ್ನು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಸಂಸದರು ಮತ್ತು ವಿವಿಧ ರಾಜ್ಯಗಳಿಂದ 646 ಮನವಿಗಳು ಮತ್ತು ರೈಲುಗಳ ಸಂಚಾರವನ್ನು ವಿಸ್ತರಿಸುವಂತೆ 303 ಕೋರಿಕೆಗಳು ಬಂದಿದ್ದವು. ಆದರೆ, ಸಚಿವರು 75 ಹೊಸ ಎಕ್ಸ್‌ಪ್ರೆಸ್‌ಗಳು ಹಾಗೂ 21 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಪ್ರಸ್ತಾಪಿಸಿದ್ದಾರೆ.ಅಂಗವಿಕಲರಿಗೆ ವಿಶೇಷ ಬೋಗಿ

ಅಂಗವಿಕಲರು ರೈಲಿನಲ್ಲಿ ಸುಖಕರವಾಗಿ ಪ್ರಯಾಣಿಸಬೇಕು ಎಂಬ ಉದ್ದೇಶದಿಂದ  ವಿಶೇಷ ವಿನ್ಯಾಸದ 2100 ಬೋಗಿಗಳನ್ನು ತಯಾರಿಸ ಲಾಗಿದೆ ಎಂದು ತಿಳಿಸಿದರು.ಪ್ರತಿಯೊಂದು ಮೈಲ್ ಮತ್ತು ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂತಹ ವಿಶೇಷ ಬೋಗಿ ಇರುತ್ತದೆ. ವಿಶೇಷ ವಿನ್ಯಾಸದ ಶೌಚಾಲಯವಿರುತ್ತದೆ ಎಂದು ತಿಳಿಸಿದರು. ವಿಶೇಷ ವಿನ್ಯಾಸದ ಬೋಗಿ ಯಲ್ಲಿ ನಾಲ್ವರು ಅಂಗವಿಕಲ ಪ್ರಯಾಣಿಕರಿಗೆ ಮತ್ತು ಇಬ್ಬರು ಸಹಾಕರಿಗೆ ಮಲಗುವ ವ್ಯವಸ್ಥೆ ಇರುತ್ತದೆ ಎಂದುನ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.