ಬುಧವಾರ, ಏಪ್ರಿಲ್ 14, 2021
31 °C

ಗುಲಸರಂ: ರಸ್ತೆ ಮೇಲೆ ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದ್ದು, ಇದ ರಿಂದಾಗಿ ಶಹಾಪುರ ತಾಲ್ಲೂಕಿನ ಗುಲ ಸರಂನ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.



ಕೆಸರು ಗದ್ದೆಯಂತಾಗಿರುವ ರಸ್ತೆ ಗಳಲ್ಲಿ ಓಡಾಡುವುದಕ್ಕೆ ಗ್ರಾಮಸ್ಥರಿಗೆ ತೊಂದರೆ ಆಗಿದೆ. ಮಕ್ಕಳು, ವೃದ್ಧರು ಈ ರಸ್ತೆಗಳಲ್ಲಿ ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಯಾಗಿ ರುವ ಈ ಗ್ರಾಮದಲ್ಲಿ ಸೌಕರ್ಯಗಳು ಮಾತ್ರ ಜನರಿಗೆ ಸಿಗದಿರುವುದು ಸೋಜಿಗದ ಸಂಗತಿ.



ಕಳೆದ ಎರಡು ವರ್ಷದಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯ ಮೇಲೆಯೇ ಚರಂಡಿ ನೀರು ಹರಿಯುವುದು ಸಾಮಾನ್ಯವಾಗಿದೆ. ಇದರಿಂದಾಗಿ ರಸ್ತೆಗಳಲ್ಲೆವೂ ಕೊಳಚೆ ಪ್ರದೇಶಗಳಾಗಿ ಪರಿವರ್ತನೆ ಆಗಿವೆ. ರಸ್ತೆಗಳಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಹೋಗು ವಂತಾಗಿದೆ ಎನ್ನುವ ಗ್ರಾಮದ ಜನರ ನೋವು.



ಇದರ ಜೊತೆಗೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸೊಳ್ಳೆ ಗಳ ಕಾಟವೂ ವಿಪರೀತವಾಗಿದೆ. ಗ್ರಾಮದಲ್ಲಿ ಒಂದೆಡೆ ದುರ್ವಾಸನೆ, ಇನ್ನೊಂದೆಡೆ ಸೊಳ್ಳೆಗಳ ಕಾಟದಿಂದ ಗ್ರಾಮದ ಜನರು ಬೇಸತ್ತಿದ್ದಾರೆ.



ಗ್ರಾಮಕ್ಕೆ ಭೇಟಿ ನೀಡುವ ನೆಂಟರು, ಸಂಬಂಧಿಕರು, ಯೋಗಕ್ಷೇಮ ವಿಚಾರಿ ಸುವುದಕ್ಕಿಂತ ಮೊದಲು ನಿಮ್ಮ ಊರಿಗೆ ಬರುವುದೇ ಕಷ್ಟದ ಕೆಲಸವಾಗಿದೆ ಎಂಬ ಮಾತುಗಳನ್ನು ಆಡುತ್ತಿದ್ದು, ಇದ ರಿಂದಾಗಿ ಗ್ರಾಮದ ಜನರಿಗೆ ತೀವ್ರ ನೋವುಂಟು ಆಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮ ಪಂಚಾಯಿತಿ ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.