ಗುಲಾಬಿ ಗ್ಯಾಂಗ್

7

ಗುಲಾಬಿ ಗ್ಯಾಂಗ್

Published:
Updated:
ಗುಲಾಬಿ ಗ್ಯಾಂಗ್

ದೆಹಲಿಯಲ್ಲಿ ನಡೆದ ಅತ್ಯಾಚಾರದ ನಂತರ ಹಲವಾರು ಘಟನೆಗಳು ನಡೆಯುತ್ತಿವೆ. ನಾಯಕರು ಅಪ್ರಬುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ನ್ಯಾಯ ಕೇಳುತ್ತಿದ್ದಾರೆ. ನಾನು ಒಂದು ವೃತ್ತಪತ್ರಿಕೆಯಲ್ಲಿ ಓದಿದ್ದೆ, ಉತ್ತರ ಭಾರತದಲ್ಲಿ “ಗುಲಾಬಿ ಗ್ಯಾಂಗ್‌” ಎಂಬ ಹೆಂಗಸರ ಗುಂಪು, ಅತ್ಯಾಚಾರಿಗಳಿಗೆ, ಭ್ರಷ್ಟರಿಗೆ, ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ, ಹೀಗೆ ಎಲ್ಲರಿಗೂ ಸಿಂಹಸ್ವಪ್ನವಾಗಿದ್ದಾರೆ.

ಅಂದರೆ ಅನ್ಯಾಯ ಮಾಡುವವರಿಗೆ ಮಾತ್ರ. ಅವರ ಲಾಠಿ ರುಚಿಯಿಂದ ಅನ್ಯಾಯ ಮಾಡು ವವರು ತತ್ತರಿಸಿಹೋಗಿದ್ದಾರೆ. ಇದೇ ರೀತಿ ನಮ್ಮ ದೇಶದಲ್ಲಿ ಎಲ್ಲಾ ಊರುಗಳಲ್ಲಿ ಈ “ಗುಲಾಬಿ ಗ್ಯಾಂಗ್‌” ಸ್ಥಾಪಿತವಾಗಲಿ. ನಮ್ಮಲ್ಲಿರುವ ಸ್ತ್ರೀ ಸಂಘಗಳು ಸರ್ಕಾರ ಕೊಡುವ ಸವಲತ್ತುಗಳಿಗಾಗಿ ಅದರ ಜೀ ಹುಜೂರ್ ಆಗಿವೆ. ಇವರೇ “ಗುಲಾಬಿ ಗ್ಯಾಂಗ್‌” ಆಗಿ ಪರಿವರ್ತನೆಗೊಂಡರೆ, ರಾಮರಾಜ್ಯ ದೂರವಿಲ್ಲ.

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry