ಗುಲಾಬಿ ಹೂಗಳ ಶಿವಲಿಂಗ ಅನಾವರಣ

7

ಗುಲಾಬಿ ಹೂಗಳ ಶಿವಲಿಂಗ ಅನಾವರಣ

Published:
Updated:
ಗುಲಾಬಿ ಹೂಗಳ ಶಿವಲಿಂಗ ಅನಾವರಣ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇಗುಲದ ಬ್ರಹ್ಮರಥೋತ್ಸವದ ಪ್ರಯುಕ್ತ ಸಡಗರ-ಸಂಭ್ರಮಾಚರಣೆ ಮುಂದುವರಿದಿದೆ. ದೇಗುಲದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಾವಿರಕ್ಕೂ ಹೆಚ್ಚು ಕೆಂಗುಲಾಬಿ ಮತ್ತು ಹಳದಿ ಗುಲಾಬಿಗಳಿಂದ ಕೂಡಿದ ಶಿವಲಿಂಗವನ್ನು ನಿರ್ಮಿಸಲಾಗಿದೆ.ಬಗೆಬಗೆಯ ಹೂಗಳಿಂದ ಮತ್ತು ಹಸಿರು ಗಿಡಗಳಿಂದ ಸುಮಾರು 5 ಅಡಿ ಎತ್ತರದ ಶಿವಲಿಂಗವನ್ನು ನಿರ್ಮಿಸಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ಬಾಳೆ ಎಲೆ, ಸಣ್ಣ ಆಲಂಕಾರಿಕ ಹಸಿರು ಸಸಿಗಳು, ಹೂವು ಮೊದಲಾದವುಗಳನ್ನು ಬಳಸಲಾಗಿದೆ. ಮಂಗಳವಾರ ತೇರು ಎಳೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಹಿಂದಿನ ಬ್ರಹ್ಮರಥೋತ್ಸವಗಳಿಗಿಂತ ಭಿನ್ನವಾದ ರೀತಿಯಲ್ಲಿ ಆಚರಿಸಲು ಪಣ ತೊಟ್ಟಿರುವ ಮುಜರಾಯಿ ಇಲಾಖೆ, ದೇವಾಲಯದ ಸಿಬ್ಬಂದಿ ಮತ್ತು ನಂದಿ ಗ್ರಾಮಸ್ಥರು ನವೀನ ಮಾದರಿಯ ಆಕರ್ಷಣೆಗೆ ಒತ್ತು ನೀಡಿದ್ದಾರೆ.`ಶಿವರಾತ್ರಿ ಮತ್ತು ಬ್ರಹ್ಮರಥೋತ್ಸವದ ಪ್ರಯುಕ್ತ ಇದೇ ಮೊದಲ ಬಾರಿ ಹೂವುಗಳಿಂದ ಕೂಡಿದ ಶಿವಲಿಂಗ ನಿರ್ಮಿಸಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಕಂಪು ಮತ್ತು ಹಳದಿ ಗುಲಾಬಿಗಳನ್ನು ಬಳಸಿದ್ದೇವೆ~ ಎಂದು ತಾಲ್ಲೂಕಿನ ಅಂದಾರ‌್ಲಹಳ್ಳಿ ನಿವಾಸಿ ಮೋನಾರ್ `ಪ್ರಜಾವಾಣಿ~ಗೆ ತಿಳಿಸಿದರು.`ತೋಟ, ಮಾರುಕಟ್ಟೆಯಿಂದ ಹೂವು ತಂದಿದ್ದೇವೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ದರ್ಶನ ಮಾಡುವುದರ ಜೊತೆಗೆ ಶಿವಲಿಂಗನ ದರ್ಶನ ಕೂಡ ಮಾಡಲಿ ಎಂಬ ಉದ್ದೇಶ. ಅಂಬರೀಶ್, ನಸ್ರುದ್ದೀನ್ ಮುಂತಾದವರ ಸಹಾಯದಿಂದ ಶಿವಲಿಂಗ ನಿರ್ಮಿಸಲಾಗಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry