ಮಂಗಳವಾರ, ಜೂನ್ 22, 2021
24 °C

ಗುಲ್ಬರ್ಗಕ್ಕೆ ಸೀಮಿತವಾದ ಖರ್ಗೆ: ಬೆಳಮಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಖಾತೆ ವಹಿಸಿಕೊಂಡ ನಂತರ ಹಳೆ ಕಾಮಗಾರಿಗಳಿಗೆ ಅಡಿ­ಗಲ್ಲು ಹಾಕುವ ಮೂಲಕ ಗುಲ್ಬರ್ಗಕ್ಕೆ ಸಿಮೀತವಾಗಿದ್ದಾರೆ ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಟೀಕಿಸಿದರು.ಇಲ್ಲಿಯ ಮುದ್ನಾಳ ಜಿನ್ ಆವರಣದಲ್ಲಿ ಶನಿವಾರ ಗುರುಮಠ­ಕಲ್ ಕ್ಷೇತ್ರದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕೇವಲ ಮಾಧ್ಯಮಗಳಿಂದ ಪ್ರಚಾರ ಪಡೆದುಕೊಂಡ ಖರ್ಗೆ, ಎಲ್ಲವನ್ನೂ ತಾವೇ ಮಾಡಿದ್ದಾಗಿ ಬಿಂಬಿಸಿ­ಕೊಂಡರು. ಆದರೆ, ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಅವರು ನೀಡಿದ ಕೊಡುಗೆ ಏನು? ಎಂದು ಪ್ರಶ್ನಿಸಿದ ಬೆಳಮಗಿ, ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯ­ಲಿದೆ. ಗುರುಮಠಕಲ್ ಕ್ಷೇತ್ರದ ಮತ­ದಾರರು ತಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮಾಡುವಲ್ಲಿ ಕೇವಲ ಕೇಂದ್ರದ ಯುಪಿಎ ಸರ್ಕಾರವಷ್ಟೇ ಕಾರಣ­ವಲ್ಲ. ಅಂದು ರಾಜ್ಯದಲ್ಲಿ ಅಧಿ­ಕಾರದಲ್ಲಿದ್ದ ಬಿಜೆಪಿ ಸರ್ಕಾರವೂ ಸಾಕಷ್ಟು ಶ್ರಮ ವಹಿಸಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಮಾತ್ರ ಸಂವಿ­ಧಾನದ 371 ನೇ ಕಲಂ ತಿದ್ದುಪಡಿ ತಾವೇ ತಿದ್ದುಪಡಿ ಮಾಡಿದ್ದಾಗಿ ಹೇಳಿ­ಕೊಂಡು ಓಡಾಡುತ್ತಿದ್ದಾರೆ. ಆ ಸಂದರ್ಭ­ದಲ್ಲಿ ರಾಜ್ಯದಲ್ಲಿ ಆಡಳಿತ­ದಲ್ಲಿದ್ದ ಬಿಜೆಪಿ ಸರ್ಕಾರವು, ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರ ಮನವೋಲಿಸುವಲ್ಲಿ ಸಾಕಷ್ಟು ಶ್ರಮ­ವಹಿಸಿದೆ ಎಂಬುದನ್ನು ಮರೆತಂತೆ ಕಾಣುತ್ತದೆ ಎಂದು ಹೇಳಿದರು.ಪಕ್ಷದ ಗುರುಮಠಕಲ್ ಕ್ಷೇತ್ರದ ಮುಖಂಡ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ಸಚಿವ ಮಲ್ಲಿಕಾರ್ಜುನ ಖರ್ಗೆ ಸತತ 40 ವರ್ಷ ಗುರಮಠ­ಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಕೇವಲ ರಸ್ತೆ ನಿರ್ಮಿಸಿದ್ದಾರೆಯೇ ವಿನಾ, ಶಿಕ್ಷಣ, ನೀರಾವರಿ ಕ್ಷೇತ್ರಗಳಿಗೆ ಗಮನ ನೀಡಿಲ್ಲ. ಮತಕ್ಷೇತ್ರದ ಸಾಮಾನ್ಯ ಮತದಾರರು ಖರ್ಗೆ ಅವ­ರನ್ನು ಭೇಟಿ ಮಾಡಲು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನ­ಮಾನ ಪಡೆದುಕೊಳ್ಳಲು ದಿ.ವಿಶ್ವನಾಥ­ರೆಡ್ಡಿ ಮುದ್ನಾಳ, ಹಣಮಂತರಾವ್ ದೇಸಾಯಿ, ವಿದ್ಯಾಧರ ಗುರೂಜಿ, ವೈಜನಾಥ ಪಾಟೀಲರು ಅವಿರತ ಹೋರಾಟ ನಡೆಸಿದ್ದಾರೆ. ಆದರೆ ಅದು ಜಾರಿಗೆ ಬಂದ ನಂತರ ಖರ್ಗೆ ತಾವೇ ಎಲ್ಲವನ್ನೂ ಮಾಡಿದ್ದು ಎಂದು ಹೇಳಿ­ಕೊಳ್ಳುತ್ತಿರುವುದು ದುರಂತದ ಸಂಗತಿ ಎಂದರು.ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ, ಮುಖಂಡರಾದ ಖಂಡಪ್ಪ ದಾಸನ್‌, ಶರಣಗೌಡ ಬಾಡಿಯಾಲ ಮಾತನಾಡಿದರು.  ಮುಖಂಡರಾದ ರಾಮರೆಡ್ಡಿ ಕ್ಯಾಸಪನಳ್ಳಿ, ದೇವದಾಸು, ಮೋಹನಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ಡಾ.ಶರಣರೆಡ್ಡಿ ಕೋಡ್ಲಾ, ಸುರೇಶ ಅಲ್ಲಿಪುರ ಸೇರಿದಂತೆ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.