ಗುರುವಾರ , ಜುಲೈ 29, 2021
23 °C

ಗುಲ್ಬರ್ಗದಲ್ಲಿ ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ಭಾನುವಾರ ಆರಂಭವಾದ ಮಳೆ ಸೋಮವಾರವೂ ಮುಂದುವರಿದಿದೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇರದೇ ಇರುವುದರಿಂದ ಕೆಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗೆ ನುಗ್ಗಿದೆ.ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿಗಳು ತುಂಬಿವೆ. ಪ್ರಕಾಶ ಚಿತ್ರಮಂದಿರದ ಹತ್ತಿರ, ಶಹಾಬಜಾರ್, ಸುಂದರ ನಗರ ಮತ್ತಿತರ ಕಡೆಗಳಲ್ಲಿ ನೀರು ರಸ್ತೆಯ ಮೇಲೆ ನಿಂತಿದ್ದು, ಪಾಲಿಕೆ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.ಜಿಲ್ಲೆಯ ಮಳೆ ವಿವರ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಯೂ ಮಳೆಯಾದ ಬಗ್ಗೆ ವರದಿಯಾಗಿದೆ.  ಗುಲ್ಬರ್ಗ 26.3 ಮಿ.ಮೀ, ಆಳಂದ 1.2 ಮಿ.ಮೀ, ಚಿಂಚೋಳಿ 14.9 ಮಿ.ಮೀ, ಸೇಡಂ 21.6 ಮಿ.ಮೀ, ಚಿತ್ತಾಪುರ 7.6 ಮಿ.ಮೀ, ಜೇವರ್ಗಿ 1.7 ಮಿ.ಮೀ, ಅಫಜಲಪುರ 00 ಮಿ.ಮೀ ಮಳೆಯಾಗಿರುವುದಾಗಿ ಜಿಲ್ಲಾ ಮಳೆ ಮಾಪನ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.