ಶನಿವಾರ, ಜೂನ್ 12, 2021
24 °C
ಕೇಂದ್ರಕ್ಕೆ ಪ್ರಸ್ತಾವನೆ: ಖಮರುಲ್ ಹೇಳಿಕೆ

ಗುಲ್ಬರ್ಗ ಅಭಿವೃದ್ಧಿಗೆ 350 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಸಮಗ್ರ ಅಭಿವೃದ್ಧಿ ಮತ್ತು ಸೌಂದರ್ಯೀ ಕರಣಕ್ಕಾಗಿ ₨ ೩೫೦ ಕೋಟಿ ನೆರವು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದರು.ನಗರದ ಎಸ್‌ಟಿಬಿಟಿ ಬಳಿ ಇರುವ ಸರ್ದಾರ್ ವಲ್ಲಭ್‌ಭಾಯ್ ಪಟೇಲ್ ಬಸ್ ನಿಲ್ದಾಣದಿಂದ ಜಗತ್ ವೃತ್ತದ ವರೆಗಿನ ರಸ್ತೆ ನಿರ್ಮಾಣಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ, ತಿರಂದಾಜ್ ಬಳಿ ನಡೆದ ಸಮಾರಂಭದಲ್ಲಿ ಮಾತನಾಡಿದರು.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸೂಚನೆಯಂತೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಅದಕ್ಕೆ ಪಾಲಿಕೆ ಮತ್ತು ಸರ್ಕಾರ ತಲಾ ಶೇ೧೦ ರಷ್ಟು  ಅನುದಾನವನ್ನು ಸೇರಿಸುವು ದರಿಂದ ಸಾಕಷ್ಟು ಅಭಿವೃದ್ಧಿಯಾಗಲಿದೆ. ಕೇಂದ್ರ ನಗರಾಭಿ ವೃದ್ಧಿ ಸಚಿವಾಲಯ ರೂಪಿಸಿರುವ ಸಣ್ಣ, ಮಧ್ಯಮ ನಗರಗಳ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲು ಒಪ್ಪಿಕೊಂಡಿದೆ ಎಂದು ತಿಳಿಸಿದರು.ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿದರು. ಪಾಲಿಕೆ ಸದಸ್ಯರಾದಮಲ್ಲಮ್ಮ ವಳಕೇರಿ, ಭೀಮರೆಡ್ಡಿ ಪಾಟೀಲ್ ಕುರಕುಂದಿ, ರಾಜಕುಮಾರ ಕಪನೂರ, ಶರಣು ಮೋದಿ, ಶಿವಾನಂದ ಪಾಟೀಲ್ ಅಷ್ಟಗಿ, ವಿಶಾಲ್ ದರ್ಗಿ, ರಮಾನಂದ ಉಪಾ ಧ್ಯಾಯ, ಮಾಜಿ ಮೇಯರ್‌ಗಳಾದ ಶಿವರಾಜ ವಳಕೇರಿ, ಸಿದ್ದರಾಮ ವಳಕೇರಿ, ಬಾಬು ಒಂಟಿ, ಪಾಲಿಕೆ ಮಾಜಿ ಸದಸ್ಯರಾದ ಗಣೇಶ ವಳಕೇರಿ, ಯಲ್ಲಪ್ಪ ನಾಯಿಕೋಡಿ, ಸೂರಜ್ ತಿವಾರಿ, ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಆರ್.ಪಿ.ಜಾಧವ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.